ಹೊಸಮಜಲು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತ್ರೈಮಾಸಿಕ ಸಭೆ

ಶೇರ್ ಮಾಡಿ

ನೆಲ್ಯಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಇವರ ಅಧ್ಯಕ್ಷತೆಯಲ್ಲಿ ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನೆಲ್ಯಾಡಿ ವಲಯ ಅಧ್ಯಕ್ಷ ಕುಶಾಲಪ್ಪ ಗೌಡ, ವಲಯ ಮೇಲ್ವಿಚಾರಕ ವಿಜೇಶ್ ಜೈನ್, ಸೇವಾಪ್ರತಿನಿದಿ ನಮಿತಾ ಎಸ್ ಶೆಟ್ಟಿ ಒಕ್ಕೂಟದ ಪದಾಧಿಕಾರಿಗಳಾದ ಕೃಷ್ಣ ಎಂ, ಹೇಮಲತಾ, ಹೇಮಾ.ವಿ, ಹೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾಖಲಾತಿ ಸಮಿತಿ ಸದಸ್ಯರು, ಉಪಸಮಿತಿ ಸದಸ್ಯರು, ಎಲ್ಲ ತಂಡಗಳ ಪ್ರಬಂಧಕ ಸಂಯೋಜಕರು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಸಭೆಯ ಜವಾಬ್ದಾರಿಯನ್ನು ಶಬರಿ ತಂಡದವರು ವಹಿಸಿಕೊಂಡಿದ್ದರು. ರಮೇಶ್ ಬಾಣಜಾಲು ಸ್ವಾಗತಿಸಿ, ವಂದಿಸಿದರು.

Leave a Reply

error: Content is protected !!