ರಾತ್ರಿ ಕಾರಿನಲ್ಲಿ ಸಾಗುತ್ತಿದ್ದವರನ್ನು ಅಡ್ಡಗಟ್ಟಿದ ಕಾಡಾನೆ

ಶೇರ್ ಮಾಡಿ

ಉಜಿರೆ ಎಸ್‌.ಡಿ.ಎಂ. ಆಸ್ಪತ್ರೆ ಸಿಬ್ಬಂದಿಯೊಬ್ಬರು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕಾಡಾನೆ ಅಡ್ಡಗಟ್ಟಿರುವ ಘಟನೆ ಪುದುವೆಟ್ಟಿನ ತಿರುವೆದಕಟ್ಟೆ ಎಂಬಲ್ಲಿ ಗುರುವಾರ ಎ.18ರಂದು ತಡರಾತ್ರಿ ನಡೆದಿದೆ.

ಉಜಿರೆ ಎಸ್‌.ಡಿ.ಎಂ. ಆಸ್ಪತ್ರೆಯ ವಾಹನ ಚಾಲಕ ಪುದುವೆಟ್ಟಿನ ಬೊಳ್ಮನಾರು ನಿವಾಸಿ, ಸುರೇಶ್ ಪೂಜಾರಿ ಗುರುವಾರ ಎ.18ರಂದು ತಡರಾತ್ರಿ 1 ಗಂಟೆ ವೇಳೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಧರ್ಮಸ್ಥಳ- ಕೊಕ್ಕಡ ರಸ್ತೆಯ ಗೋಂಕ್ರಾರ್ ಬಳಿ ಪುದುವೆಟ್ಟು ಕ್ರಾಸ್ ದಾಟಿ ಹೋಗುವಾಗ ತಿರುವೆದಕಟ್ಟೆಯ ಸಮೀಪ ಕಾಡಾನೆ ಎದುರಾಗಿದೆ. ಸುರೇಶ್ ಪೂಜಾರಿ ಅವರು ಸುಮಾರು 20 ಅಡಿ ದೂರಲ್ಲಿ ಆನೆಯನ್ನು ನೋಡಿ ಕಾರನ್ನು ನಿಲ್ಲಿಸಿದ್ದು, ಆನೆ ಎರಡು ಬಾರಿ ಘೀಳಿಟ್ಟು ನಾಲ್ಕು ಹೆಜ್ಜೆ ಮುಂದೆ ಬಂದಿದೆ. ತಕ್ಷಣ ಅವರು ಕಾರನ್ನು ರಿವರ್ಸ್ ಗೇರ್‌ನಲ್ಲಿ ಮುಖ್ಯರಸ್ತೆಯವರೆಗೆ ಬಂದು ಉಜಿರೆಗೆ ವಾಪಸ್ ಹೋಗುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.

Leave a Reply

error: Content is protected !!