ಕೊಕ್ಕಡ: ಪುತ್ತಿಗೆ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಶೇರ್ ಮಾಡಿ

ಕೊಕ್ಕಡ : ಪುತ್ತಿಗೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯರ ಉಪಸ್ಥಿತಿಯಲ್ಲಿ ಏ.19ರಂದು ನಡೆಯಿತು.

ಏ.19ರ ಬೆಳಗ್ಗೆ ಗಣಹೋಮ, ಕಲಶ ಪೂಜೆ, ದೇವರಿಗೆ ಕಲಶಾಭಿಷೇಕ, ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ, ಬೆಳಗ್ಗೆ 8ರಿಂದ ಕೊಕ್ಕಡ ವೈದ್ಯನಾಥೇಶ್ವರ ಭಜನಾ ತಂಡ ಹಾಗೂ ಪಡುಬೆಟ್ಟು ಮಹಿಳಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು, ಬಳಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ 7ರಿಂದ ಪಡುಬೆಟ್ಟು ಭಜನಾ ತಂಡದಿಂದ ಭಜನೆ, ಗಣಪತಿ ದೇವರಿಗೆ ಮತ್ತು ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ಹಾಗೂ ದುರ್ಗಾ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ದೀಪಕ್ ರಾಜ್, ಕಿಶೋರ್ ಕುಮಾರ್ ಪುತ್ಯೆ, ಶಶಿ ಗೌಡ ಪುತ್ಯೆಮಜಲು, ರಾಮಕೃಷ್ಣ ದೇವಾಡಿಗ, ತಿಮ್ಮಪ್ಪ ಗೌಡ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

error: Content is protected !!