ಪಡುಬೆಟ್ಟು: ರಬ್ಬರ್ ತೋಟ ಬೆಂಕಿಗಾಹುತಿ

ಶೇರ್ ಮಾಡಿ

ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅನಾಹುತದಿಂದ ರಬ್ಬರ್ ತೋಟ ಸುಟ್ಟುಹೋದ ಘಟನೆ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ಎ.25ರಂದು ಸಂಭವಿಸಿದೆ.

ಪಡುಬೆಟ್ಟು ಮಕ್ಕಿಗದ್ದೆ ನಿವಾಸಿ ಶಿವರಾಮ ಗೌಡ ಎಂಬವರ ರಬ್ಬರ್ ತೋಟದ ಮೂಲಕ ಹಾದುಹೋಗಿದ್ದ ವಿದ್ಯುತ್ ಲೈನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಸಂಭವಿಸಿದೆ. ಬೆಂಕಿಯ ಕಿಡಿಯಿಂದಾಗಿ ಶಿವರಾಮ ಗೌಡರಿಗೆ ಸೇರಿದ ಸುಮಾರು 200 ರಬ್ಬರ್ ಗಿಡಗಳು ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಹರಸಾಹಸ ಪಟ್ಟು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

error: Content is protected !!