ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಮತದಾನ ಪ್ರಮಾಣದ ಪರಿಷ್ಕೃತ ವರದಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ರಾಜ್ಯದಲ್ಲಿ 69.56% ಮತದಾನ ನಡೆದಿದೆ.
ಉಡುಪಿ-ಚಿಕ್ಕಮಗಳೂರು 77.15%, ಹಾಸನ 77.68%, ದಕ್ಷಿಣ ಕನ್ನಡ 77.56%, ಚಿತ್ರದುರ್ಗ 73.30%, ತುಮಕೂರು 78.05%, ಮಂಡ್ಯ 81.67%, ಮೈಸೂರು 70.62%, ಚಾಮರಾಜನಗರ 76.81% ಮತದಾನ ನಡೆದಿದೆ.
ಬೆಂಗಳೂರು ಗ್ರಾಮಾಂತರ 68.30%, ಬೆಂಗಳೂರು ಉತ್ತರ 54.45%, ಬೆಂಗಳೂರು ಕೇಂದ್ರ 54.06%, ಬೆಂಗಳೂರು ದಕ್ಷಿಣ 53.17%, ಚಿಕ್ಕಬಳ್ಳಾಪುರ 77.00%, ಕೋಲಾರ 78.27% ಮತ ಚಲಾವಣೆಯಾಗಿದೆ.