ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ

ಶೇರ್ ಮಾಡಿ

ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ ಮೇ 1ರಂದು ಬೆಳಿಗ್ಗೆ ನಡೆಯಿತು.

ಮೇ 1 ರಿಂದ 7ರ ತನಕ ವಾರ್ಷಿಕ ಹಬ್ಬವು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ ಹಾಗೂ ಹಾಗೂ ಮದ್ರಾಸ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ.ವಂ.ಗೀವರ್ಗೀಸ್ ಮಾರ್ ಫಿಲಕ್ಸಿನೋಸ್ ಮೆತ್ರಾಪೋಲೀತ್ತಾ ರವರ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ.

ಮೇ 1ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ ನಡೆದು ಹಬ್ಬದ ಧ್ವಜಾರೋಹಣ, 12:30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, ಸಂಜೆ 6.00ಕ್ಕೆ ಸಂಜೆ ಪ್ರಾರ್ಥನೆ ನಡೆಯಿತು.

ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್, ವಿವಿಧ ಚರ್ಚ್‌ನ ಧರ್ಮಗುರುಗಳು ಸಹಕರಿಸಿದರು. ಚರ್ಚ್‌ನ ಆಡಳಿತ ಸಮಿತಿ ಕಾರ್ಯದರ್ಶಿ ವಿ.ಎನ್.ಚಾಕೋ, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಸದಸ್ಯರುಗಳಾದ ಮೇಹಿ ಜಾರ್ಜ್, ರೋಯಿ.ಪಿ.ಜಿ., ಕುರಿಯಾಕೋಸ್.ಟಿ.ಕೆ., ಟಿ.ಜೆ.ವರ್ಗೀಸ್, ಜಾನ್ಸನ್.ಸಿ.ಕೆ., ಜೋಜಿ ತೋಮಸ್,, ಟಿ.ವಿ.ತೋಮಸ್, ಅಬ್ರಹಂ.ಟಿ.ಎಂ., ಬಾಜಿ ಜೋಸೆಫ್, ಲೆಕ್ಕ ಪರಿಶೋಧಕರಾದ ಪಿ.ಸಿ.ಪೌಲೋಸ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

error: Content is protected !!