ನವೀಕರಣಗೊಂಡ ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನ ಉದ್ಘಾಟನೆಯ ಸಭಾ ಕಾರ್ಯಕ್ರಮ
ನೆಲ್ಯಾಡಿ: ಸಂತ ತೋಮಸರ ಧ್ಯೇಯ ವಾಕ್ಯವಾದ ನನ್ನ ಕರ್ತರೆ, ನನ್ನ ದೇವರು ಎಂದು ಯೇಸುಸ್ವಾಮಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿದ ಅವರ ಸೇವಾ ಸನ್ನದೆಯನ್ನು ಕೊಂಡಾಡಿದರು. ದೇವ ಜನತೆಯ ಶಕ್ತಿ ದೇವಾಲಯವೆಂದು ಹೇಳಿದರು. ನನ್ನ ನಾಮವನ್ನು ಲೋಕದ ಕಟ್ಟ ಕಡೆಗೆ ಸಾರಿ ಅಲ್ಲಿಯ ಜನತೆಯೊಂದಿಗೆ ಐಕ್ಯತೆ ಹಾಗೂ ಪ್ರೀತಿಯ ಜೀವನವನ್ನು ನಡೆಸಲು ದೇವರು ತೋರಿಸಿದ ಸ್ಥಳಕ್ಕೆ ನೀವು ಹೋಗಬೇಕು. ಈ ದೇವಾಲಯವು ದೇವರ ದರ್ಶನವನ್ನು ಪಡೆಯುವ ಆಲಯ ಇಲ್ಲಿಗೆ ಬಂದು ಕ್ರೈಸ್ತವ ಸಾಕ್ಷ್ಯವಾದ ಪ್ರೀತಿಯ ಸಂದೇಶವನ್ನು ಲೋಕಕ್ಕೆ ಸಾರಬೇಕು. ಈ ಚರ್ಚ್ ಸಮಾಜಕ್ಕೆ ಒಂದು ಅನುಗ್ರಹವಾಗಲೆಂದು ಪರಮಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೊಸ್, ಧರ್ಮಾಧ್ಯಕ್ಷರು ಪುತ್ತೂರು ಆಶೀರ್ವದಿಸಿದರು.
ನವೀಕರಣಗೊಂಡ ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನ ಉದ್ಘಾಟನೆಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪರಮಪೂಜ್ಯ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ ಅವರು ದೇವರ ಆಶೀರ್ವಾದ, ಕಠಿನ ಪರಿಶ್ರಮದಿಂದ ದೇವಾಲಯ ನಿರ್ಮಾಣವಾಗಿದೆ. ಕಳೆದ 25 ವರ್ಷಗಳಿಂದ ಚರ್ಚ್ ಗಳ ಬೆಳವಣಿಗೆಗಾಗಿ ಊರ, ಪರವೂರ ದಾನಿಗಳು ಉದ್ಧಾರವಾಗಿ ಸಹಕಾರವನ್ನು ನೀಡಿದ್ದಾರೆ. ಈ ಚರ್ಚ್ ಎಲ್ಲರ ಇಷ್ಟಾರ್ಥ ಸಿದ್ಧಿಗೆ ಸಹಕಾರವಾಗಲಿ ಎಂದರು.
ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಾನ್ ರಿಚರ್ಡ್ ಲೋಬೋ ಮಾತನಾಡಿ ಕ್ರೈಸ್ತ ಧರ್ಮದವರಿಗೆ ಕೇಂದ್ರಬಿಂದು ಚರ್ಚ್ ಆಗಿದೆ. ನಾವು ಯಾವುದೇ ಒಳ್ಳೆಯ ಕೆಲಸ ಮಾಡಲು ಮೊದಲು ದೇವಾಲಯಕ್ಕೆ ಬರುತ್ತೇವೆ. ದೇವಾಲಯಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್ ನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೆ.ರೆ.ಫಾ.ವರ್ಗೀಸ್ ಪುದಿಯಿಡತ್ತ್ ಧರ್ಮಗುರುಗಳು, ಕುಟ್ರುಪ್ಪಾಡಿ, ರೆ.ಫಾ.ಮೋನ್ಸಿಂಜೋರ್ ಜೋಸೆಫ್ ವಲಿಯಪರಂಬಿಲ್ ಬೆಳ್ತಂಗಡಿ ಧರ್ಮಪ್ರಾಂತ್ಯ, ರೆ.ಫಾ.ತೋಮಸ್ ಕರಿಂಗಡಿಯಿಲ್, ಕಪೂಚಿನ್ ಪ್ರೊಮಿನ್‍ಶಿಯಾಲ್ ಮಿನಿಸ್ಟರ್ ಪಾವನಾತ್ಮಾ ಪ್ರೋವಿನ್ಸ್, ಕಣ್ಣೂರು, ರೆ.ಫಾ.ತೋಮಸ್ ಕಣ್ಣಾಂಗಲ್, ಧರ್ಮಗುರುಗಳು ಬೆಳ್ತಂಗಡಿ, ರೆ.ಸಿಸ್ಟರ್. ಲಿಸ್ಸ್ ಮ್ಯಾಥ್ಯು ಎಸ್.ಎಚ್ ರೀಜನಲ್ ಸುಪೀರಿಯರ್ ನೆಲ್ಯಾಡಿ, ಕಾರ್ತಿಕೇಯನ್. ಕೆ.ಎನ್, ಅಧ್ಯಕ್ಷರು ಗ್ರಾ.ಪಂ. ಶಿರಾಡಿ, ಬಿಟ್ಟಿ.ಬಿ.ನೆಡುನಿಲಂ, ಅಧ್ಯಕ್ಷರು ಕೆಎಸ್‍ಎಮ್‍ಸಿಎ ಬೆಳ್ತಂಗಡಿ ಧರ್ಮಕ್ಷೇತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪರಮಪೂಜ್ಯ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ, ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್ ಇವರನ್ನು ಚರ್ಚ್ ನ ವತಿಯಿಂದ ಸನ್ಮಾನಿಸಲಾಯಿತು.
ಚರ್ಚ್ ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್ ಸ್ವಾಗತಿಸಿದರು, ಶಿಕ್ಷಕ ತೋಮಸ್ ಮತ್ತು ಶಿಕ್ಷಕಿ ತ್ರೇಸಿಯಮ್ಮ ಕಾರ್ಯಕ್ರಮ ನಿರೂಪಿಸಿದರು. ರೆ.ಫಾ.ಅಖಿಲ್ ಒಂಡುಕಾಟ್ಟಿಲ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ, ಅಭಿಜಿತ್ ಕೊಲ್ಲಂ ಮತ್ತು ಟೀಮ್ ಅವರಿಂದ ಗಾನ ಮೇಳ ನಡೆಯಿತು.