ಬರೆಂಗಾಯದ ಸಾನಿಧ್ಯ ಟ್ರೇಡರ್ಸ್‌ನಿಂದ ಹಾಡಹಗಲೇ 65 ಸಾವಿರ ರೂ. ಹಣ ಕಳವು

ಶೇರ್ ಮಾಡಿ

ನಿಡ್ಲೆ ಬರೆಂಗಾಯದ ತುಳುನಾಡು ವಾಣಿಜ್ಯ ಸಂಕೀರ್ಣದಲ್ಲಿರುವ ಸಾನಿಧ್ಯ ಟ್ರೇಡರ್ಸ್‌ನಲ್ಲಿ ಮೇ 6ರಂದು ಬೆಳಗ್ಗೆ 65,000 ರೂ. ನಗದು, ಎಟಿಎಂ ಕಾರ್ಡ್ ಸಹಿತ ಇನ್ನಿತರ ದಾಖಲೆಗಳನ್ನು ಹೊಂದಿರುವ ಬ್ಯಾಗ್ ಕಳವಾಗಿದೆ.

ಅಂಗಡಿ ಮಾಲಕ ಸಂತೋಷ್ ಮುಂಜಾನೆ ಎಂದಿನಂತೆ ಅಂಗಡಿ ತೆರೆದ ನಂತರ ಚಹಾ ಕುಡಿಯಲೆಂದು ಪಕ್ಕದ ಹೋಟೆಲಿಗೆ ತೆರಳಿದಾಗ ಈ ಕೃತ್ಯ ನಡೆದಿದೆ. ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ಸಿ.ಸಿ ಕ್ಯಾಮೆರಾ ಪರಿಶೀಲಿಸಿದಾಗ ಘಟನೆ ನಡೆದ ಒಂದು ಗಂಟೆ ಮುಂಚೆ ಕ್ಯಾಮೆರಾವನ್ನು ಆಫ್ ಮಾಡಿರುವುದು ಪತ್ತೆಯಾಗಿದೆ. ಮಹಡಿಯ ಮೇಲೆ ಕ್ಯಾಮೆರಾದ ವೈರನ್ನು ಕಟ್ ಮಾಡಲಾಗಿದೆ.

Leave a Reply

error: Content is protected !!