ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

ಶೇರ್ ಮಾಡಿ

ಕಾರಿನ ಚಾಲಕರಿಗೆ ಸೈಡ್ ಕೊಟ್ಟಿಲ್ಲ ಕಾರಣಕ್ಕಾಗಿ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಆದಿತ್ಯವಾರ ಸಂಜೆ ವೇಳೆ ನಡೆದಿದೆ.

ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಬಸ್ ಚಾಲಕನಾಗಿದ್ದು, ಅವರ ಮೇಲೆ ಹಲ್ಲೆಯಾಗಿದೆ ಎಂದು ಬಂಟ್ವಾಳ ನಗರ ಪೋಲಿಸ್ ‌ಠಾಣೆಗೆ ದೂರು ನೀಡಿದ್ದಾರೆ. ಘಟನೆಯಿಂದ ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದೆ ಎಂದು ತಿಳಿಸಲಾಗಿದೆ.

ಕೆಎಸ್ಆರ್ ಟಿಸಿಗೆ ಬಸ್ ಗೆ ಕಾರು ಅಡ್ಡಗಟ್ಟಿ ಜಖಂಗೊಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಂಡದ ಮೇಲೆ ಕಾನೂನು ಕ್ರಮಕ್ಕೆ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ವಿವರ
ಮಂಗಳೂರು ಡಿಪೋದಿಂದ ಸೋಮವಾರ ಪೇಟೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ಸುಮಾರು 4 ಗಂಟೆಗೆ ದಾಸಕೋಡಿಗೆ ಬಸ್ ತಲುಪಿದಾಗ ಕೆ.ಎ.03 ಎಮ್.ಕೆ.8149 ಮತ್ತು ಕೆ.ಎ.05 ಎ.ಎನ್.6722 ನೊಂದಾವಣೆಯ ಕಾರುಗಳಲ್ಲಿ ಬಂದ ಆರು ಜನರು ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಈ ಎರಡು ಕಾರುಗಳಿಗೆ ಮುಂದೆ ಹೋಗಲು ಸೈಡ್ ಕೊಟ್ಟಿಲ್ಲ ಎಂಬ ಆರೋಪ ಮಾಡಿ, ಬಸ್ಸನ್ನು ಅಡ್ಡಗಟ್ಟಿ ಸೈಡ್ ಮಿರರನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.

ಬಳಿಕ ಚಾಲಕ ಕೃಷ್ಣಪ್ಪ ಅವರನ್ನು ಸೀಟಿನಿಂದ ಎಳೆದುಹಾಕಿ ಕೈಯಿಂದ ಹಣೆಗೆ ಮುಖಕ್ಕೆ ಎಡಕೈಗೆ ಹಿಗ್ಗಾಮುಗ್ಗ ಹೊಡೆದು ಅವ್ಯಾಚ್ಚ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಜೊತೆಗೆ ಬಸ್ ನ ಎದುರು ಭಾಗದ ಗಾಜನ್ನು ಕೈಯಿಂದ ಗುದ್ದಿ ಜಖಂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!