ಸ್ಮೋಕ್ ಹೌಸ್ ಗೆ ಬೆಂಕಿ-ಒಣ ಅಡಿಕೆ, ರಬ್ಬರ್ ಶೀಟ್ ಬೆಂಕಿಗಾಹುತಿ

ಶೇರ್ ಮಾಡಿ

ನೆಲ್ಯಾಡಿ: ಮನೆ ತಾರಸಿಯ ಮೇಲಿನ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆ ಹಾಗೂ ರಬ್ಬರ್ ಶೀಟ್ ಬೆಂಕಿಗಾಹುತಿ ಆಗಿರುವ ಘಟನೆ ಕೊಣಾಜೆ ಗ್ರಾಮದ ಮಾಳ ಎಂಬಲ್ಲಿ ಮೇ 7 ರಂದು ಸಂಜೆ ನಡೆದಿದೆ.

ಸ್ಯಾಮುವೆಲ್ ಎಂಬವರು ತಮ್ಮ ಮನೆಯ ಮೇಲಿನ ತಾರಸಿಯಲ್ಲಿ ಸ್ಮೋಕ್ ಹೌಸ್ ಮಾಡಿದ್ದು ಅಲ್ಲೇ ರಬ್ಬರ್ ಶೀಟ್ ಹಾಗೂ ಒಣ ಅಡಿಕೆ ಸಂಗ್ರಹಿಸಿಟ್ಟಿದ್ದರು. ಸ್ಮೋಕ್ ಹೌಸ್ ನ ಬೆಂಕಿಯ ಕಿಡಿ ಹರಡಿ ಸಂಭವಿಸಿದ ಬೆಂಕಿಯ ಕೆನ್ನಾಲಿಗೆಗೆ ಸುಮಾರು 15 ಕ್ವಿಂಟಾಲ್ ಒಣ ಅಡಿಕೆ ಹಾಗೂ 8 ಕ್ವಿಂಟಾಲ್ ರಬ್ಬರ್ ಶೀಟ್ ಸುಟ್ಟು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಸ್ಯಾಮುವೆಲ್ ಅವರು ಹೊರ ರಾಜ್ಯದಲ್ಲಿ ಉದ್ಯೋಗ ದಲ್ಲಿದ್ದು ತೋಟ ನೋಡಿಕೊಳ್ಳಲು ಮೇಲ್ವಿಚಾರಕರ ನೇಮಕ ಮಾಡಿದ್ದರು. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

Leave a Reply

error: Content is protected !!