ಇಚ್ಲಂಪಾಡಿ: ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ನ ಏಳು ದಿನಗಳ ವಾರ್ಷಿಕ ಹಬ್ಬ ಸಂಪನ್ನ

ಶೇರ್ ಮಾಡಿ

ನೆಲ್ಯಾಡಿ: ಸಂತ ಜಾರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬದ ಅಂಗವಾಗಿ ಮೇ.1 ರಿಂದ ಮೇ.7ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.

ಮೇ 6ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಎನ್.ಆರ್.ಪುರ ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್ ನ ಧರ್ಮಗುರು ರೆ.ಫಾ.ಬೆನ್ನಿ ಮ್ಯಾಥ್ಯುರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ, ಸಂತ ಜಾರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಅನೇಕ ಧರ್ಮಗುರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ಸಂಧ್ಯಾ ಪ್ರಾರ್ಥನೆ, ಹಬ್ಬದ ಸಂದೇಶ ನಡೆಯಿತು. ಬಳಿಕ ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಿತು. ದಿವ್ಯ ಬಲಿಪೂಜೆಯ ಬಳಿಕ ಉರುಳು ಸೇವೆ ಸೇರಿದಂತೆ ವಿವಿಧ ರೀತಿಯ ಹರಕೆಗಳನ್ನು ಭಕ್ತರು ಸಲ್ಲಿಸಿದರು. ಚರ್ಚ್ನ ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್, ಟ್ರಸ್ಟಿ ಜೋನ್ ಎಬ್ರಹಾಂ, ಚೀರಮಟ್ಟಂ, ಕಾರ್ಯದರ್ಶಿ ವಿ.ಎನ್. ಚಾಕೋ., ಆಡಳಿತ ಮಂಡಳಿ ಸದಸ್ಯರುಗಳಾದ ಮೇಹಿ ಜಾರ್ಜ್, ರೋಯಿ.ಪಿ.ಜಿ., ಕುರಿಯಾಕೋಸ್.ಟಿ.ಕೆ., ಟಿ.ಜೆ.ವರ್ಗೀಸ್, ಜಾನ್ಸನ್.ಸಿ.ಕೆ., ಜೋಜಿ ತೋಮಸ್,, ಟಿ.ವಿ.ತೋಮಸ್, ಅಬ್ರಹಂ.ಟಿ.ಎಂ., ಬಾಜಿ ಜೋಸೆಫ್, ಲೆಕ್ಕ ಪರಿಶೋಧಕರಾದ ಪಿ.ಸಿ.ಪೌಲೋಸ್ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.

ಮೇ.7ರಂದು ಬೆಳಿಗ್ಗೆ 7.30ಕ್ಕೆ ಪ್ರಭಾತ ಪ್ರಾರ್ಥನೆ, ಮದ್ರಾಸ್ ಧರ್ಮಪ್ರಾಂತ್ಯದ ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್ಅ ತೀ ವಂದನೀಯ ಗೀವರ್ಗೀಸ್ ಮಾರ್ ಫಿಲಿಕ್ಸಿನೋಸ್ ರವರ ನೇತೃತ್ವದಲ್ಲಿ ಪವಿತ್ರ ದಿವ್ಯಬಲಿ ಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಲೋಕಾಯುಕ್ತ ಎಸ್.ಪಿ.ಸೈಮನ್ ಸಿ.ಎ ಅವರಿಗೆ ಜೋರ್ಜಿಯನ್ ಪುರಸ್ಕಾರ ನೀಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಏಲಂ, ಹೊಸಂಗಡಿ ಶಿಲುಬೆ ಗೋಪುರದ ತನಕ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಹಬ್ಬದ ಧ್ವಜ ಇಳಿಸುವಿಕೆ, ಹಬ್ಬದ ಸಮಾರೋಪ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತ್ತು.

Leave a Reply

error: Content is protected !!