ಕಡಬ ಹಿರಿಯ ಫೋಟೋಗ್ರಾಫರ್ ರಮ್ಯ ಸ್ಟುಡಿಯೋ ಮಾಲಕ ಶಿವರಾಮ ಗೌಡ ಮುಂಗ್ಲಿಮನೆ ನಿಧನ

ಶೇರ್ ಮಾಡಿ

ನೇಸರ ಫೆ.12: ಹಿರಿಯ ಛಾಯಾಗ್ರಾಹಕ, ಕಡಬ ವರ್ತಕ ಸಂಘದ ಅಧ್ಯಕ್ಚ ಶಿವರಾಮ ಎಂ.ಎಸ್.ಅವರು ಫೆ.12 ರ ನಸುಕಿನ ಜಾವ ನಿಧನರಾದರು.
ಕಡಬದಲ್ಲಿ ಪ್ರಥಮವಾಗಿ ಪೋಟೋ ಸ್ಟುಡಿಯೋ ಪ್ರಾರಂಭಿಸಿ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಸದಸ್ಯರಾಗಿದ್ದು, ಕಡಬ ಗೌಡ ಸಂಘದ ಸಂಚಾಲಕರಾಗಿದ್ದರು. ಪೊಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಲಯನ್ಸ್, ಜೇಸಿಐ, ವರ್ತಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.ಇವರು ಕಳೆದ ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಚೆ ನೀಲಾವತಿ ಶಿವರಾಮ್ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
ಶಿವರಾಮ ಗೌಡ ಮುಂಗ್ಲಿಮನೆಯವರ ಮೃತ ದೇಹವನ್ನು ಕಡಬಕ್ಕೆ ಕೊಂಡೊಯ್ದು ಅಂತಿಮ ನಮನ ಸಲ್ಲಿಸಿ, ಪುತ್ತೂರು ಕಬಕ ಗ್ರಾಮದ ಮುಂಗ್ಲಿಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಮೃತರ ಸಹೋದರ ರವಿ ಮುಂಗ್ಲಿಮನೆ ತಿಳಿಸಿದ್ದಾರೆ.

“ಕೆಸರ್ ಡೊಂಜಿ ಗೌಜಿ” ಕ್ರೀಡಾಕೂಟ ವೀಕ್ಷಿಸಿ, Subscribers ಮಾಡಿ

Leave a Reply

error: Content is protected !!