ಅಂಕತ್ತಡ್ಕ ಶಾಲೆಯಲ್ಲಿ ಶುಕ್ರವಾರ ನಮಾಝ್ ಮಾಡಿದ ವಿದ್ಯಾರ್ಥಿಗಳು – ವಿಡಿಯೋ ವೈರಲ್

ಶೇರ್ ಮಾಡಿ

ನೇಸರ ಫೆ.12: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರಕಾರಿ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋ ಇದೀಗ ಹರಿದಾಡುತ್ತಿದೆ.

ಮಹಿಷಮರ್ದಿನಿ ಯಕ್ಷಗಾನ ವೀಕ್ಷಿಸಿ, Subscribers ಮಾಡಿ

ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ ಅಂಕತ್ತಡ ಶಾಲೆಯಲ್ಲಿ ಸಾಮೂಹಿಕವಾಗಿ ನಮಾಝ್ ಮಾಡಿದ್ದು, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಶಾಲಾ ಮುಖ್ಯಸ್ಥರಿಗೆ ಈ ವಿಚಾರವನ್ನು ಈ ಹಿಂದೆಯೂ ಗಮನಕ್ಕೂ ತರಲಾಗಿದ್ದರೂ ಮತ್ತೆ ಮುಂದುವರಿಕೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೋಷಕರ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು.ಶುಕ್ರವಾರದ ನಮಾಝ್ ಗೆ ಮಕ್ಕಳನ್ನು ಬಿಡಲು ಹೆತ್ತವರು ಪೋಷಕರ ಸಭೆಯಲ್ಲಿ ಕೋರಿದ್ದರು. ಆಗ ಮಕ್ಕಳನ್ನು ಕರೆದೊಯ್ದು ವಾಪಸು ಬಿಡುವಂತೆ ಪೋಷಕರಿಗೆ ತಿಳಿಸಿದ್ದರು. ಆದರೆ ಪೋಷಕರು ಬಾರದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಯಲ್ಲೇ ನಮಾಝ್ ಮಾಡಲು ಮುಂದಾದರು ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದ ವೀಡಿಯೋ ಹರಿದಾಡುತ್ತಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನೆಯಾಗಿದ್ದು ಶಾಲೆಯತ್ತ ಅಧಿಕಾರಿಗಳು ದೌಡಾಯಿಸಿದ್ದಾರೆ.ಬೆಳ್ಳಾರೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

—ಜಾಹೀರಾತು—

Leave a Reply

error: Content is protected !!