ನೆಲ್ಯಾಡಿ: 2023-24 ರ ವಾರ್ಷಿಕ ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಸಂತ ಜಾರ್ಜ್ ವಿದ್ಯಾಸಂಸ್ಥೆಗೆ ಎಸ್ ಎಲ್ ಸಿ ಯಲ್ಲಿ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶೇ.100 ಫಲಿತಾಂಶ ಪಡೆದಿದೆ.
ಕನ್ನಡ ಮಾಧ್ಯಮ ವಿಭಾಗ:
64 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು. 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಜುವಿನತ್ ಮುಫೀದ (587), ಮೋಕ್ಷಿತ. ಎಸ್(584), ಪುಣ್ಯಶ್ರೀ (573), ರಕ್ಷಿತ್(569), ಅರ್ಚನಾ. ವಿ (569), ನಿತೇಶ್. ಎಸ್ ಗೌಡ(543) ಅಂಕವನ್ನು ಪಡೆದಿದ್ದಾರೆ.
ಆಂಗ್ಲ ಮಾಧ್ಯಮ ವಿಭಾಗ:
65 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 9ವಿದ್ಯಾರ್ಥಿಗಳು ವಿಶಿಷ್ಟತೆಯಲ್ಲಿ, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಎಂಟು ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅನಘಾ.ಕೆ (614), ಮನ್ವಿತಾ(587), ಆಯಿಷತ್ ಫಾಹಿಮಾ(579), ಅನುಶ್ರೀ.ಪಿ ನಾಯರ್ (563), ಪ್ರಜ್ಞಾ.ಕೆ.ಪಿ(558), ತನ್ಮಯ್.ಕೆ(550), ದಿವೀಶ್.ಡಿ(542), ಫಾತಿಮಾತ್ ಶ್ಯಾಮ(540), ಆಯಿಷಾ ರಫಿಯಾ (538) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಸಂಸ್ಥೆಯ ಸಂಚಾಲಕ ರೆ.ಫಾ ನೋಮಿಸ್ ಕುರಿಯಾಕೋಸ್, ಮುಖ್ಯೋಪಾಧ್ಯಾಯರಾದ ಎಂ.ವೈ. ತೋಮಸ್, ಹರಿಪ್ರಸಾದ್ ತಿಳಿಸಿದ್ದಾರೆ.