ಕೊಕ್ಕಡ: ಕಳೆದ ಮಾರ್ಚ್/ಎಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆ ಶೇ.100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ 38 ವಿದ್ಯಾರ್ಥಿಗಳಲ್ಲಿ ಕುಮಾರಿ ಅನುಷಾ.ಯು(565), ಕುಮಾರಿ ದೀಕ್ಷಾ.ಬಿ (562), ಕುಮಾರಿ ಟಿನ್ಸಿ.ಎ.ಪಿ(536) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 21 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ, 9 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿಯೂ, 5 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿಯೂ ಉತ್ತೀರ್ಣರಾಗಿ ಶಾಲೆಗೆ ಶೇಕಡ 100 ಫಲಿತಾಂಶವನ್ನು ತಂದಿರುತ್ತಾರೆ..
ಉತ್ತಮ ಫಲಿತಾಂಶವನ್ನು ಪಡೆದು ಶಾಲೆಯ ಕೀರ್ತಿಯನ್ನು ಬೆಳಗಿಸಿದ ವಿದ್ಯಾರ್ಥಿಗಳನ್ನು ಸಂಚಾಲಕರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.