ಬೆಳ್ತಂಗಡಿ ಚಿರತೆ ಓಡಾಟ: ಭಯಭೀತರಾದ ಜನರು

ಶೇರ್ ಮಾಡಿ

ಬೆಳ್ತಂಗಡಿ ಸಮೀಪದ ಹುಣ್ಸೆಕಟ್ಟೆಯ ಪಂಜಿರ್ಪು ಎಂಬಲ್ಲಿ ಮೇ.11ರಂದು ಬೆಳ್ಳಂಬೆಳ್ಳಗೆ ಚಿರತೆಯು ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಕಂಡುಬಂದಿದೆ.

ಪಂಜಿರ್ಪು ಗಣೇಶ್ ಐತಾಳ್ ರವರ ಮನೆಯ ಸಮೀಪ ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಚಿರತೆ ರಸ್ತೆಯ ಬದಿ ಓಡಾಡುತ್ತಿರುವ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದ್ದು, ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಹಲವು ಮನೆಗಳಿದ್ದು ಇಲ್ಲಿಯ ಜನರು ಭಯಭೀತರಾಗಿದ್ದಾರೆ.
ಈ ಪ್ರದೇಶವು ನಗರದಿಂದ ಒಂದು ಕಿಮೀ ದೂರದಲ್ಲಿದೆ. ಇಲ್ಲಿಗೆ ಸಮೀಪ ಕೊಯ್ಯೂರು ಮತ್ತು ಗೇರುಕಟ್ಟೆ ಅರಣ್ಯ ಪ್ರದೇಶವು ಇದೆ. ಚಿರತೆ ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಆಗಾಗ ಓಡಾಟ ನಡೆಸುವುದು ಮಾಮೂಲಾಗಿದ್ದು ಈಗ ಹುಣ್ಸೆಕಟ್ಟೆಗೆ ವರೆಗೂ ತನ್ನ ವ್ಯಾಪ್ತಿ ಮುಂದುವರಿಸಿದೆ.

Leave a Reply

error: Content is protected !!