ಕೊಕ್ಕಡ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಶೇರ್ ಮಾಡಿ

ಕೊಕ್ಕಡ ತೋಟದ ಮೂಲೆಮನೆ ನಿವಾಸಿ ಚೋಮ((65) ಎಂಬುವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.10ರಂದು ನಡೆದಿದೆ.

ದಯಾನಂದ ಎಂಬುವರ ದೂರಿನಂತೆ ಕೊಕ್ಕಡ ಗ್ರಾಮದ ತೋಟದ ಮೂಲೆಮನೆ ನಿವಾಸಿ ದಯಾನಂದರವರ ತಂದೆ ಚೋಮರವರು ಕೂಲಿ ಕೆಲಸ ಮಾಡಿಕೊಂಡಿದ್ದು ಮೇ.09 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಸಮಯ ಮನೆಗೆ ಬಂದು ರಾತ್ರಿ ಊಟ ಮುಗಿಸಿ ಬೇಗನೇ ಮಲಗಿದ್ದವರು. ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ಎದುರಿನಲ್ಲಿರುವ ಸುಂದರ ಗೌಡರವರ ರಬ್ಬರ್ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

error: Content is protected !!