ಕಡಬ: ನೂಜಿಬಾಳ್ತಿಲ ಗ್ರಾಮದ ನದಿ ತಟದ ಮರಳು ಶೆಡ್ ನಲ್ಲಿ ಸಿಡಿಲು ಬಡಿದು ಓರ್ವ ಕಾರ್ಮಿಕ ಸಾವು,ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಶೇರ್ ಮಾಡಿ

ಸಿಡಿಲು ಬಡಿದು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಚಿಲಂಪಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.ಉತ್ತರ ಪ್ರದೇಶದ ಚೈನ್ ಪುರ ಮೂಲದ ಶ್ರೀ ಕಿಶುನ್ ಮೃತ ವ್ಯಕ್ತಿ.

ಇಚಿಲಂಪಾಡಿಯ ಕುರಿಯಾಳ ಕೊಪ್ಪ ಎಂಬಲ್ಲಿ ಮರಳು ತೆಗೆದು ಶೆಡ್ ನಲ್ಲಿ ಮೂವರು ಕುಳಿತಿದ್ದ ವೇಳೆ ಸಿಡಿಲು ಬಡಿದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Reply

error: Content is protected !!