ಕೊಕ್ಕಡ:ದಭೆ೯ತಡ್ಕ ಶ್ರೀಕಾಲಕಾಮ ಪರಶುರಾಮ ದೇವಸ್ಥಾನದ ಚಿತ್ಪಾವನ ಸಭಾ ಸಭಾಭವನದಲ್ಲಿ ಮೇ.3 ರಿಂದ ನಡೆಯುತ್ತಿದ್ದ ‘ವೇದ ಕುಸುಮ’ಶಿಬಿರವು ಮೇ12ರಂದು ಸಂಪನ್ನಗೊಂಡಿತು.
ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಶಿಬಿರದಲ್ಲಿ ಬೆಂಗಳೂರು, ಕಾಕ೯ಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಿಂದ ಸಮಾಜದ 20 ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ, ಅಥವ೯ಶೀಷ೯, ಗಣಪತಿ ಸೂಕ್ತ, ಶ್ಲೋಕಗಳು, ಪುರುಷ ಸೂಕ್ತಗಳನ್ನು ಕಲಿಸಲಾಯಿತು. ಉಚಿತವಾಗಿ ನಡೆಸುವ ಶಿಬಿರ. ಗುರುಗಳಾದ ಗೋಪಾಲ ಮರಾಠೆ, ಶ್ರೇಯಸ್ ಪಾಳಂದೆ, ಅಶೋಕ ಗೋಗಟೆಯವರಿಗೆ ಗುರುದಕ್ಷಿಣೆಯನ್ನು ಶಿಬಿರಾಥಿ೯ಗಳು ನೀಡಿ ಗೌರವಿಸಿದರು. ಶಂಕರ ವೇದ ಪಾಠಶಾಲೆಯ ಅಂಶುಮಾನ ಅಭ್ಯಂಕಾರ್ ಸಮಯೋಚಿತವಾಗಿ ಮಾತನಾಡಿದರು. ಉದಯ ಕುಮಾರ ಅಭ್ಯಂಕಾರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಂಘದ ಅಧ್ಯಕ್ಷ ಶ್ರೀವರದ ಶಂಕರ ದಾಮಲೆ ಸ್ವಾಗತಿಸಿದರು. ಯೋಗೀಶ ದಾಮಲೆ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾಪ೯ಣೆಯನ್ನು ಮಾಡಿದರು. ಶಿಬಿರಾಥಿ೯ಯವರ ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.