ಆನೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೊಲೆರೋ ರಸ್ತೆ ಬದಿಯ ಚರಂಡಿಗೆ

ಶೇರ್ ಮಾಡಿ

ಚಾರ್ಮಾಡಿ: ರಸ್ತೆಯಲ್ಲಿ ಭಾರಿ ಮಂಜು ಆವರಿಸಿದ್ದು ಈ ವೇಳೆ ರಸ್ತೆ ಮಧ್ಯದಲ್ಲಿ ಆನೆಯೊಂದು ಗೋಚರಿಸಿದೆ ಗಾಬರಿಗೊಂಡ ಬೊಲೆರೋ ಚಾಲಕ ಚರಂಡಿಗೆ ಇಳಿಸಿದ್ದಾನೆ.

ಚಾರ್ಮಾಡಿ ಘಾಟಿಯ 8-9ನೇ ತಿರುವಿನ ಮಧ್ಯೆ ಘಟನೆ ನಡೆದಿದ್ದು ರಾತ್ರಿ ಹೊತ್ತು ದಟ್ಟ ಮಂಜು ಆವರಿಸಿದ ಪರಿಣಾಮ ಚಾಲಕನಿಗೆ ರಸ್ತೆ ಸರಿಯಾಗಿ ಗೋಚರವಾಗಲಿಲ್ಲ ಈ ವೇಳೆ ಏಕಾಏಕಿ ರಸ್ತೆ ಮಧ್ಯೆ ಆನೆಯೊಂದು ಕಂಡುಬಂದಿದೆ ಈ ವೇಳೆ ಜೀಪಿನಲ್ಲಿದ್ದವರು ಗಾಬರಿಗೊಂಡಿದ್ದಾರೆ ಅಲ್ಲದೆ ಆನೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಜೀಪಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು ಆನೆ ಜೀಪಿನಲ್ಲಿದ್ದವರ ಮೇಲೆ ದಾಳಿ ಮಾಡದೇ ಕಾಡಿನತ್ತ ಪ್ರಯಾಣ ಬೆಳೆಸಿದೆ.

ಕಳೆದ 15 ದಿನಗಳಿಂದ ಚಾರ್ಮಾಡಿಯಲ್ಲಿ ಆನೆ ಸಂಚಾರ ಹೆಚ್ಚಾಗಿದ್ದುವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Leave a Reply

error: Content is protected !!