ಜನನಿ ಜನ್ಮಭೂಮಿ ನಮ್ಮ ದೇವರು

ಶೇರ್ ಮಾಡಿ

ಜನನಿ ಜನ್ಮ ಭೂಮಿ ನಮ್ಮ ದೇವರೆನ್ನಿರೋ.
ಆ ದೇವರನ್ನು ಮನದಿ ಸದಾ ಪೂಜೆ ಮಾಡಿರೋ.
ಜನನಿ ಜನ್ಮ ಭೂಮಿ ನಮ್ಮ ದೇವರೆನ್ನಿರೋ….~~
ಆ ದೇವರನ್ನು ಮನದಿ ಸದಾ ಪೂಜೆ ಮಾಡಿರೋ…..
ಭರತ ಮಾತೆ ನಮ್ಮಮ್ಮ ನಾವು ಬೆಳೆವ ತೊಟ್ಟಿಲು.
ನಮ್ಮಮ್ಮನ ಎದೆಹಾಲನು ಕುಡಿದ ನಾವು ಮಕ್ಕಳು…2
ನಮ್ಮಮ್ಮನ ಎದೆಹಾಲನು ಕುಡಿದ ನಾವು ಮಕ್ಕಳು..2
||ಜನನಿ ||
BGM
ಭೂಮಿಯೊಡಲ ಮೇಲೆ ನಾವು ಕಾಲಿಡುವ ಮುನ್ನಾ..
ಕ್ಷಮಿಸು ತಾಯೆ ಎಂದೆನಲು ಮರೆಯಬೇಡ ಚಿನ್ನಾ…2
ಕ್ಷಮಿಸು ತಾಯೆ ಎಂದೆನಲು ಮರೆಯಬೇಡ ಚಿನ್ನಾ….2
||ಜನನಿ ||
BGM
ಸರ್ವ ತ್ಯಾಗ ಮಾಡುವವಳು ಅವಳೇ ನಮ್ಮ ಅಮ್ಮ.
ಅದನು ನೀನು ಎಂದೆಂದಿಗೂ ಮರೆಯಬೇಡ ತಮ್ಮ…
ಅದನು ನೀನು ಎಂದೆಂದಿಗೂ ಮರೆಯಬೇಡ ತಮ್ಮ…2
||ಜನನಿ ||
BGM
ಉಸಿರ ನೀಡಿ ಬೆಳೆಸುವಳು ನಮ್ಮ ತಾಯಿ ಜನನಿ.
ಉಸಿರು ನಿಂತ ಮೇಲೆ ನಮ್ಮ ಸೆಳೆಯುವಳು ಅವನಿ…2
ಉಸಿರು ನಿಂತ ಮೇಲೆ ನಮ್ಮ ಸೆಳೆಯುವಳು ಅವನಿ…2
||ಜನನಿ ||

ರಚನೆ :ವಿಶ್ವನಾಥ.ಶೆಟ್ಟಿ.ಕೆ.ನೆಲ್ಯಾಡಿ

Leave a Reply

error: Content is protected !!