ಇಚ್ಲಂಪಾಡಿ: ಮಂಜುಶ್ರೀ ನಿಲಯ ನಾಗರಾಜ ಆರಿಗ(78ವ.) ನಿಧನ.

ಶೇರ್ ಮಾಡಿ

ಇಚ್ಲಂಪಾಡಿ ಗ್ರಾಮದ ಮಂಜುಶ್ರೀ ನಿಲಯ ನಾಗರಾಜ ಆರಿಗ (78ವ.) ಮೇ 14 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ನಾಗರಾಜ ಆರಿಗರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಮೇಲ್ವಿಚಾರಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ,ಇಚ್ಲಂಪಾಡಿ ಬೀಡಿನ ಬ್ರಹ್ಮಕಲಶೋತ್ಸವ ಸಮಿತಿಯಲ್ಲೂ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.

ಅವರ ಪತ್ನಿ ಕುಶಾಲ. ಏನ್. ಅರಿಗ ಎರಡು ವರ್ಷಗಳ ಹಿಂದೆಯಷ್ಟೇ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು.ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2 ಗಂಟೆಗೆ ಸ್ವಗ್ರಹದಲ್ಲಿ ನಡೆಯಿತು.

ಮೃತರು ಮೂವರು ಹೆಣ್ಣುಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಅಪಾರ ಸಂಖ್ಯೆಯ ಬಂಧು ಬಳಗ ಮತ್ತು ಆಪ್ತರನ್ನು ಅಗಲಿದ್ದಾರೆ.

Leave a Reply

error: Content is protected !!