ನೆಲ್ಯಾಡಿ: ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇದರ ವತಿಯಿಂದ ಸಂಗೀತಾಸಕ್ತ ಮಕ್ಕಳಿಗೆ ಎರಡು ದಿವಸಗಳ ಸುಗಮ ಸಂಗೀತ ಮತ್ತು ಕೀಬೋರ್ಡ್ ತರಬೇತಿ ಕಾರ್ಯಗಾರ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ಪರಮ ಪೂಜ್ಯ ರೇ.ಫಾ.ನೋಮಿಸ್ ಕುರಿಯಾಕೋಸ್ ರವರ ಆಶೀರ್ವಾದದಿಂದ ಆರಂಭಗೊಂಡಿತು.
ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅತಿಥಿಗಳಾದ ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರು ರವೀಂದ್ರ.ಟಿ ಅವರು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಸಂಗೀತ ಮುಂತಾದ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವುದರೊಂದಿಗೆ ಭಾರತೀಯ ಸಂಸ್ಕೃತಿಯನ್ನು ಬೆಳೆಸಿ ಉಳಿಸಬೇಕು ಎಂದು ನುಡಿದರು. ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್. ಕೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪೋಷಕರ ಪ್ರತಿನಿಧಿ ಉದಯ ಶೆಟ್ಟಿಯವರು ಉಪಸ್ಥಿತರಿದ್ದರು. ಲಹರಿ ಸಂಗೀತ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಗೀತ ಗುರು ವಿಶ್ವನಾಥ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮೊದಲನೆಯ ದಿವಸದ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಮತ್ತು ಕೀಬೋರ್ಡ್ ತರಗತಿ ನಡೆಯಿತು. ಎರಡನೆಯ ದಿವಸ ವೆಸ್ಟರ್ನ್ ಕಾರ್ಡ್ಸ್ ಮತ್ತು ನೊ ಟೇಶನ್ ಗಳ ಬಗ್ಗೆ ಮಂಗಳೂರಿನ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಗುರು ಬಾಯಾರ್ ಇವರಿಂದ ತರಗತಿ ನಡೆಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರು ವೆಂಕಟರಮಣ.ಆರ್, ರವೀಂದ್ರ.ಟಿ. ವರ್ತಕ ಸಂಘದ ಅಧ್ಯಕ್ಷ ಸತೀಶ್.ಕೆ.ಎಸ್, ಸದಸ್ಯರುಗಳಾದ ರವಿಚಂದ್ರ ಆಚಾರ್ಯ, ದಿವಾಕರ ಭಟ್ ಹಾಗೂ ಪೋಷಕರು ಭಾಗವಹಿಸಿದ್ದರು.