ಲಾರಿ-ಮಿನಿ ಬಸ್ಸು-ಕಾರಿನ ಮಧ್ಯೆ ಢಿಕ್ಕಿ ಸರಣಿ ಅಪಘಾತ

ಶೇರ್ ಮಾಡಿ

ಬಿ.ಸಿ.ರೋಡಿನ ಕೆಎಸ್ಸರ‍್ಟಿಸಿ ಬಸ್‌ ನಿಲ್ದಾಣದ ಮುಂಭಾಗ ಲಾರಿ-ಮಿನಿ ಬಸ್‌-ಕಾರಿನ ಮಧ್ಯೆ ಢಿಕ್ಕಿ ಸರಣಿ ಅಪಘಾತ ಸಂಭವಿಸಿ ವಾಹನಗಳು ಜಖಂಗೊಂಡ ಘಟನೆ ಬುಧವಾರ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಮಂಗಳೂರು ಭಾಗದಿಂದ ಕಬ್ಬಿಣದ ಸರಕನ್ನು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಸೊತ್ತುಗಳನ್ನು ಹಿಂಬದಿಯಲ್ಲಿ ವ್ಯಾಪ್ತಿ ಮೀರಿ ತುಂಬಿಲಾಗಿದ್ದು, ಬಿ.ಸಿ.ರೋಡಿನ ಕೆಎಸ್ಸರ‍್ಟಿಸಿ ಬಸ್‌ ನಿಲ್ದಾಣದ ಮುಂಭಾಗ ಲಾರಿ ಚಾಲಕ ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ಹಿಂಬದಿಯಲ್ಲಿದ್ದ ಮಿನಿ ಬಸ್‌ ವ್ಯಾಪ್ತಿ ಮೀರಿ ತುಂಬಿದ್ದ ಕಬ್ಬಿಣದ ಸೊತ್ತಗಳಿಗೆ ಢಿಕ್ಕಿಯಾಗಿ ಅದರ ಗಾಜು ಒಡೆದಿದೆ.

ಹಿಂಬದಿಯಲ್ಲಿ ಢಿಕ್ಕಿಯಾದ ಪರಿಣಾಮ ಲಾರಿ ಮುಂದಕ್ಕೆ ಚಲಿಸಿ ವ್ಯಾಗನರ್‌ ಕಾರಿಗೆ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮಿನಿ ಬಸ್‌, ಕಾರಿಗೆ ಹೆಚ್ಚಿನ ಹಾನಿಯಾಗಿದ್ದು, ಲಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ಬಿ.ಸಿ.ರೋಡಿನಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಬಳಿಕ ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

Leave a Reply

error: Content is protected !!