ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು

ಶೇರ್ ಮಾಡಿ

ತೋಟಕ್ಕೆ ತೆರಳಿದ್ದ ವೇಳೆ ಗಾಳಿ-ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಬುಧವಾರ ಸಂಜೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಸಂಭವಿಸಿದೆ.

ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ (65) ಮೃತರು.

ಮೀನಾಕ್ಷಿ ಅವರು ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ಸಂಜೆ ತೆರಳಿದ್ದ ವೇಳೆ ಗಾಳಿ-ಮಳೆಗೆ ತೋಟದಲ್ಲಿನ ಮರವೊಂದು ಇವರ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ.

ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

error: Content is protected !!