ಕೌಕ್ರಾಡಿ: ವಂ.ಫಾ.ಜಗದೀಶ್ ಲೂಯಿಸ್ ಪಿಂಟೊ ರಿಗೆ ಬೀಳ್ಕೊಡುಗೆ ಸಮಾರಂಭ

ಶೇರ್ ಮಾಡಿ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯ ಇಲ್ಲಿನ ಧರ್ಮಗುರು ವಂ.ಫಾ.ಜಗದೀಶ್ ಲೂಯಿಸ್ ಪಿಂಟೊ ಅವರು 6ವರ್ಷಗಳ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ, ಮಂಗಳೂರು ಧರ್ಮಪ್ರಾಂತ್ಯದ ಖಜಾಂಜಿಯಾಗಿ ವರ್ಗಾವಣೆಯಾಗುವ ಈ ಸಂದರ್ಭದಲ್ಲಿ ಚರ್ಚ್ ನ ವತಿಯಿಂದ ಬೀಳ್ಕೊಡುಗೆ ಸಮಾರಂಭ ಮತ್ತು ಅವರ ಜನ್ಮದಿನದ ಆಚರಣೆಯನ್ನು ನಡೆಸಲಾಯಿತು.

ಸರಳ ಸ್ವಭಾವ ಮತ್ತು ಜನ ಮೆಚ್ಚಿದ ಗುರುಗಳ ಸೇವೆಯನ್ನು ಸ್ಮರಿಸಿ ಅವರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಫಾ.ಅಶೋಕ್, ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, 21 ಆಯೋಗಗಳ ಸಂಚಾಲಕ ವಿನ್ನಿಪ್ರೆಡ್ ಡಿಸೋಜ ಮತ್ತು ಧರ್ಮಪ್ರಾಂತ್ಯದ ಸಮಿತಿ ಸದಸ್ಯ ವಿನ್ಸೆಂಟ್ ಮಿನೇಜಸ್‌ ಉಪಸ್ಥಿತರಿದ್ದರು.

Leave a Reply

error: Content is protected !!