ಕೌಕ್ರಾಡಿ ಸಂತ ಜೋನರ ಚರ್ಚ್ ನ ಧರ್ಮಗುರುಗಳಾಗಿ ವಂ.ಅನಿಲ್ ಪ್ರಕಾಶ್ ಡಿ’ಸಿಲ್ವಾ ಅಧಿಕಾರ ಸ್ವೀಕಾರ

ಶೇರ್ ಮಾಡಿ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯಕ್ಕೆ ಕಾಸರಗೋಡು ಕುಂಬ್ಳೆ ದೇವಾಲಯದಿಂದ ವರ್ಗಾವಣೆಗೊಂಡು ನೂತನ ಧರ್ಮಗುರುಗಳಾಗಿ ವಂ.ಅನಿಲ್ ಪ್ರಕಾಶ್ ಡಿ ಸಿಲ್ವಾರವರು ಮೇ.15ರಂದು ಸಂಜೆ 4.00 ಗಂಟೆಗೆ ಅಧಿಕಾರ ಸ್ವೀಕರಿಸಿದರು.

ಬಳಿಕ ಚರ್ಚ್ ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಬಿಷಪ್ ಪ್ರತಿನಿಧಿಯಾಗಿ ಪುತ್ತೂರು ವಲಯ ಪ್ರಧಾನ ಗುರುಗಳಾದ ವಂ.ಫಾ.ಲಾರೆನ್ಸ್ ಮಸ್ಕರೇನ್ಹಸ್ ರವರು ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಫಾ. ಅಶೋಕ್ ರವರು ನಿರೂಪಿಸಿದರು. ಕಾಸರಗೋಡು ವಲಯ ಪ್ರಧಾನ ಗುರು ವಂ.ಫಾ.ಸ್ಟ್ಯಾನಿ ಪಿರೇರಾ, ಪುತ್ತೂರು ಹಾಗೂ ಕಾಸರಗೋಡು ವಲಯಗಳ ದೇವಾಲಯದ ಧರ್ಮಗುರುಗಳು ಉಪಸ್ಥಿತರಿದ್ದರು. ಕುಂಬ್ಳೆ ಚರ್ಚ್ ಉಪಾದ್ಯಕ್ಷರು ರಾಜ್ ಸ್ಟೀವನ್ ಡಿಸೋಜ ಹಾಗೂ ಕೊಕ್ಕಡ ಮತ್ತು ಕುಂಬ್ಳೆ ದೇವಾಲಯದ ಭಕ್ತಾಧಿಗಳು ಹಾಜರಿದ್ದರು.

ಕೊಕ್ಕಡ ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ ಸ್ವಾಗತಿಸಿದರು, ದೇವಾಲಯದಿಂದ ನಿರ್ಗಮಿಸುವ ವಂದನೀಯ ಫಾ.ಜಗದೀಶ್ ಲೂಯಿಸ್ ಪಿಂಟೊ ರವರು ವಂದಿಸಿದರು, ಚರ್ಚ್ ಪಾಲನ ಸಮಿತಿ ಸದಸ್ಯ ವಿನ್ಸೆಂಟ್ ಮಿನೇಜಸ್‌ ರವರು ನಿರೂಪಿಸಿದರು.

Leave a Reply

error: Content is protected !!