5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ.!

ಶೇರ್ ಮಾಡಿ

ಒಂದು ಸಣ್ಣ ಕಾರಣದಿಂದಾಗಿ ಪತ್ನಿಯೊಬ್ಬಳು ಪತಿಯ ಜೊತೆ ಇರಲು ಸಾಧ್ಯವಿಲ್ಲವೆಂದು ವಿಚ್ಚೇದನ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ಮದುವೆಯಾದ ದಂಪತಿ ಜೀವನದಲ್ಲಿ ಮನಸ್ತಾಪ ಆಗುವಂಥ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಪತ್ನಿಗೆ ಹುರಿದ ತಿನಿಸು ಅಂದ್ರೆ ಪ್ರಾಣ. ಅದರಲ್ಲೂ ಕುರ್ಕುರೆ ಆಕೆಗೆ ಅಚ್ಚುಮೆಚ್ಚು. ಈ ಕಾರಣದಿಂದ ಪ್ರತಿದಿನ ಪತಿಯ ಬಳಿ ತಪ್ಪದೇ 5 ರೂಪಾಯಿ ಕುರ್ಕುರೆ ತರುವಂತೆ ಹೇಳುತ್ತಿದ್ದಳು.

ಆರಂಭದಲ್ಲಿ ಪತಿ ಪತ್ನಿ ಹೇಳಿದಂತೆ ಕುರ್ಕುರೆ ತಂದುಕೊಡುತ್ತಿದ್ದ ಆದರೆ ದಿನಗಳು ಕಳೆಯುತ್ತ ಹೋದಂತೆ ಪತಿ ಕೆಲಸದಲ್ಲಿ ನಿರತರಾಗಿದ್ದಾಗ, ಕುರ್ಕುರೆ ತರಲು ನೆನಪು ಆಗುತ್ತಿರಲಿಲ್ಲ. ಇದರಿಂದ ಒಂದೆರೆಡು ಬಾರಿ ಸಿಟ್ಟಾದ ಪತ್ನಿ, ಮತ್ತೆ ಮತ್ತೆ ಕುರ್ಕುರೆ ಬಗ್ಗೆ ನೆನಪಿಸಿದ್ದಾಳೆ. ಆದರೆ ಮತ್ತೆ ಕುರ್ಕುರೆ ತರಲು ಮರೆತ ಪತಿಯ ವಿರುದ್ದ ಸೇಡು ತೀರಿಸಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ತವರು ಮನೆಗೆ ಹೋಗಿ ಕೂರುತ್ತಾರೆ.

ಎರಡು ತಿಂಗಳ ಬಳಿಕ ತವರು ಮನೆಯಿಂದಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾಳೆ. ಆದರೆ ಡಿವೋರ್ಸ್ ನಲ್ಲಿ ಪತ್ನಿ ನನ್ನ ಪತಿ ನಾನು ಹೇಳಿದ 5 ರೂಪಾಯಿ ಕುರ್ಕುರೆ ತಂದು ಕೊಡಲಿಲ್ಲ. ನನ್ನನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಕಾರಣವನ್ನು ಕೊಟ್ಟಿದ್ದಾರೆ.

ಪತಿ ಹಾಗೂ ಪತ್ನಿ ಇಬ್ಬರನ್ನು ಕೌನ್ಸಿಲಿಂಗ್ ಮಾಡಲಾಗಿದೆ. 6 ತಿಂಗಳಿನಿಂದ ಪತ್ನಿಯ ವರ್ತನೆ ಬದಲಾಗಿದೆ. ಪ್ರತಿ ದಿನ 5 ರೂಪಾಯಿ ಕುರ್ಕುರೆ ತರಲು ಹೇಳಿದ್ದೆ. ಒಂದು ದಿನವೂ ತರದೆ ಅಸಡ್ಡೆ, ನಿರ್ಲಕ್ಷ್ಯ ಮಾಡಿದ್ದಾರೆ. ಇವರೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದ ಪತ್ನಿ ದೂರಿದ್ದಾಳೆ.

ಈ ವೇಳೆ ಪತಿ ತನಗೆ ಥಳಿಸಿದ ಕಾರಣ ತವರಿಗೆ ಹೋಗಿದ್ದೇನೆ ಎನ್ನುವ ಮಾತನ್ನೂ ಕೂಡ ಮಹಿಳೆ ಹೇಳಿದ್ದಾರೆ.

Leave a Reply

error: Content is protected !!