
ಕೊಕ್ಕಡ ರೆಂಜೆತ್ತಡಿ ನಿವಾಸಿ ಆಲ್ಬರ್ಟ್ ಡಿಸೋಜಾ(73.ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ.19ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ನೆಲ್ಯಾಡಿ ಗ್ರಾಮ ಪಂಚಾಯಿತಿನಲ್ಲಿ 35ವರ್ಷಗಳ ಕಾಲ ವಾಟರ್ ಮ್ಯಾನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದಾರೆ .
ನೆಲ್ಯಾಡಿಯ ಸುತ್ತು ಮುತ್ತಲಿನ ಜನರ ಸೇವೆಯನ್ನು ಮಾಡಿದವರು, ನೆಲ್ಯಾಡಿ ಪ್ರಸಿದ್ಧ ದೇವಾಲಯವಾದ ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿ ಸುಬ್ರಹ್ಮಣ್ಯ ಆಚಾರ್ಯರೊಂದಿಗೆ ಸೇವೆಯನ್ನು ಮಾಡುತ್ತಿದ್ದರು. ಸದಾ ಬಿಳಿ ಪಂಚೆ ಮತ್ತು ಅಂಗಿ ಧರಿಸಿ ಇವರು ಸೇವೆಯನ್ನು ನೀಡುತ್ತಿದ್ದರು.
ಇವರಿಗೆ ಪತ್ನಿ ರೀಟಾ ಡಿಸೋಜಾ, ಹೆಣ್ಣು ಮಕ್ಕಳಾದ ಬೆನೆಡಿಕ್ಟ ಡಿಸೋಜಾ, ಲಿಲ್ಲಿ ಡಿಸೋಜಾ ಹಾಗೂ ಇಟಲಿಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಮಗ ವಂ.ಫಾ.ಅಶೋಕ್ ಡಿಸೋಜಾ ಇದ್ದಾರೆ.






