
ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆ ಕುಸಿದು 7ರ ಹರೆಯದ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಮೃತ ಬಾಲಕಿಯನ್ನು ಸಿದ್ದೀಕ್ ಎಂಬವರ ಪುತ್ರಿ ಶಾಝಿಯಾ ಬಾನು(7) ಎಂದು ಗುರುತಿಸಲಾಗಿದೆ.
ಹರೇಕಳದ ನ್ಯೂಪಡ್ಪು ಎಂಬಲ್ಲಿ ಹರೇಕಳ ಹಾಜಬ್ಬರ ಪ್ರಯತ್ನದಿಂದ ಆರಂಭಗೊಂಡ ಈ ಸರ್ಕಾರಿ ಶಾಲೆಯಲ್ಲಿ ಮುಡಿಪು ಕಾಲೇಜು ವಿದ್ಯಾರ್ಥಿಗಳಿಂದ ಎನ್ ಎಸ್ ಎಸ್ ಶಿಬಿರ ನಡೆಯುತ್ತಿತ್ತು. ಇದೇ ಶಾಲೆಯಲ್ಲಿ ಈಕೆ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಗೇಟ್ ನಲ್ಲಿ ಈಕೆ ಆಟವಾಡುತ್ತಿದ್ದಾಗ ಗೇಟ್ ಸಮೇತ ಆವರಣ ಗೋಡೆ ಈಕೆಯ ಮೇಲೆ ಬಿದ್ದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.






