ಕಡಬ ಐಐಸಿಟಿ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ ಪ್ರಥಮ ವರ್ಷದಲ್ಲಿ 100% ಫಲಿತಾಂಶ

ಶೇರ್ ಮಾಡಿ

ಕಡಬ: ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ(Ministry of corporate affairs Govt of India) ಅಧೀನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ನ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐ ಎಸ್ ಓ 9001: 2015 ಸಂಸ್ಥೆಯಿಂದ ಪ್ರಾಮಾಣಿಕರಿಸಿದ ಐಐಸಿಟಿ ಶಿಕ್ಷಣ ಸಂಸ್ಥೆಯ ವತಿಯಿಂದ ಮೊಂಟೆಸ್ಸರಿ(ನರ್ಸರಿ ಟೀಚರ್ ಟ್ರೈನಿಂಗ್ Dmed) ಶಿಕ್ಷಕರ ತರಬೇತಿ ಪರೀಕ್ಷೆಗೆ ಹಾಜರಾದ 9 ವಿದ್ಯಾರ್ಥಿನಿಯರಲ್ಲಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ ಪ್ರಥಮ ವರ್ಷದಲ್ಲಿ 100% ಫಲಿತಾಂಶ ಲಭಿಸಿದೆ.

ಸಫ್ರೀನಾ.ಎನ್(94.75%), ವಾಣಿಶ್ರೀ(94.00%), ಸಂಧ್ಯಾ(93.06%), ಫಾತಿಮತ್ ಆಶ್ರೀಯಾ(91.94%), ಅನುಷಾ(90.44%) ವಿಶಿಷ್ಟ ಶ್ರೇಣಿ ಮತ್ತು ಮಾನ್ಯಶ್ರೀ(89.38%), ನಂದಿನಿ.ಜಿ.ಎ(88.25%), ಫಾತಿಮತ್ ಜಂಶೀರಾ(87.81%), ಕೃಷ್ಣವೇಣಿ (86.50%) ಪ್ರಥಮ ದರ್ಜೆಯನ್ನು ಪಡೆದಿರುತ್ತಾರೆ.

ಜಾಬ್ ಓರಿಯೆಂಟೆಡ್ ತರಬೇತಿ ಇದಾಗಿದ್ದು, ತರಬೇತಿ ಪಡೆದ ಪ್ರತಿಯೊಬ್ಬರಿಗೂ ಉದ್ಯೋಗವಕಾಶವನ್ನು ನೀಡುವ ಭರವಸೆಯೊಂದಿಗೆ ಅತಿ ಕಡಿಮೆ ಶುಲ್ಕದೊಂದಿಗೆ ತರಬೇತಿಯನ್ನು ನೀಡುವ ಸಂಸ್ಥೆ ಇದಾಗಿದೆ. 2024-25ನೇ ಸಾಲಿನ ಶೈಕ್ಷಣಿಕ ವರುಷದ ದಾಖಲಾತಿ ಆರಂಭಗೊಂಡಿದ್ದು. ಆಸಕ್ತರು ದೂರವಾಣಿ ಸಂಖ್ಯೆ 9448409912, 9743271502, 9148121463 ಸಂಪರ್ಕಿಸಬಹುದಾಗಿದೆ.

Leave a Reply

error: Content is protected !!