ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಹೆಚ್ ಆರ್ ಮತ್ತು ಪ್ಲೇಸ್ಮೆಂಟ್ ಘಟಕದ ವತಿಯಿಂದ ವಿವಿಧ ವೃತ್ತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ಪ್ರವೇಶ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಮೇ.21ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಟೈಮ್ಸ್ ಮಂಗಳೂರು ಇದರ ಮ್ಯಾನೇಜರ್ ಆಶಿತ್ ಪೂಜಾರಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಂತಿಮ ಪದವಿ ತೇರ್ಗಡೆಯಾದವರಿಗೆ ಉದ್ಯೋಗಾವಕಾಶಗಳ ಪ್ರವೇಶ ಪರೀಕ್ಷೆ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ದಿನೇಶ್.ಪಿ.ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹೆಚ್ ಆರ್ ಪ್ಲೇಸ್ಮೆಂಟ್ ಘಟಕದ ಸಂಯೋಜಕ ರಮಾನಾಥ್ ಉಪಸ್ಥಿತರಿದ್ದರು. ಹೆಚ್.ಆರ್ ಪ್ಲೇಸ್ಮೆಂಟ್ ವಿದ್ಯಾರ್ಥಿ ಸಂಯೋಜಕಿ ಮೇಘ ವೈ.ಎಸ್ ಅಂತಿಮ ಉದ್ಯಮ ಆಡಳಿತ ಪದವಿ ಇವರು ಸ್ವಾಗತಿಸಿ ಅತಿಥಿಗಳ ಪರಿಚಯಗೈದರು.