ಕೊಕ್ಕಡ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಕುರಿತಂತೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯನಿರ್ವಹಣಾಧಿಕಾರಿ ವೈಜಣ್ಣನವರು ನರೇಗಾದಲ್ಲಿ ಮಾನವ ದಿನ ಪ್ರಗತಿ ಸಾಧಿಸುವುದಕ್ಕಾಗಿ, ಹೆಚ್ಚಾಗಿ ಸಾರ್ವಜನಿಕ ಕಾಮಗಾರಿಗಳಲ್ಲಿ ಭಾಗವಹಿಸಿ, ತಮ್ಮ ಗ್ರಾ.ಪಂ ಅಭಿವೃದ್ಧಿ ಪಡಿಸಿಕೊಳ್ಳಿ. ನರೇಗಾ ಯೋಜನೆಯಿಂದ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು ಹಾಗೂ ನರೇಗಾ ಯೋಜನೆ ಕುರಿತು ಚರ್ಚಿಸಿದರು.
ಈ ಸಂದರ್ಭ ರೋಜ್ ಗಾರ್ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ, ತಾಂತ್ರಿಕ ಸಹಾಯಕ ಅಭಿಯಂತರರು ಗೌತಮ್.ಪಿ., ತಾಲೂಕು ನರೇಗಾ ಐಇಸಿ ಸಂಯೋಜಕರು ವಿನಿಷ, ಗ್ರಾ.ಪಂ ಸಿಬ್ಬಂದಿಗಳಾದ ಕೇಶವ, ಗುಣಾಶೀಲ ಬಿ, ರಾಜೇಶ್ವರಿ.ಹೆಚ್, ನಿರ್ಮಲ, ಸಂಜೀವಿನಿ.ಯಂ. ಬಿ.ಕೆ ಯಶೋಧ, ಎಲ್.ಸಿ.ಆರ್.ಪಿ ಗಾಯತ್ರಿ, ಪಶು ಸಖಿ ದೀಪಿಕಾ, ಕೃಷಿ ಸಖಿ ನವ್ಯ ಉಪಸ್ಥಿತರಿದ್ದರು.