ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ ;ಕಂಟೈನರ್,ಇನ್ನೋವಾ ಡಿಕ್ಕಿ; ತಾಯಿ, ಮಗ ದುರ್ಮರಣ

ಶೇರ್ ಮಾಡಿ

ನೆಲ್ಯಾಡಿ: ಇನ್ನೋವಾ ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ಇನ್ನೋವಾದಲ್ಲಿದ್ದ ತಾಯಿ, ಮಗ ದಾರುಣವಾಗಿ ಮೃತಪಟ್ಟು ನಾಲ್ಕೈದು ಮಂದಿ ಗಂಭೀರವಾದ ಗಾಯಗೊಂಡಿರುವ ಘಟನೆ ಮೇ 21 ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನ ಕೆಂಪುಹೊಳೆ ಎಂಬಲ್ಲಿ ನಡೆದಿದೆ.

ಈ ಪೈಕಿ ಗಂಭೀರ ಗಾಯಗೊಂಡಿದ್ದ ತಾಯಿ, ಮಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ, ಮೃತಪಟ್ಟವರನ್ನು ತಾಯಿ ಸಫಿಯಾ, ಮಗ ಶಫೀಕ್ ಎಂದು ಗುರುತಿಸಲಾಗಿದೆ.

ಮದುವೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದ ಬಂಟ್ವಾಳ ತಾಲೂಕಿನ ಬೊಂಡಾಲದ ಕುಟುಂಬವೊಂದು ಬೆಂಗಳೂರಿನಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾರು ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪಿಸುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

Leave a Reply

error: Content is protected !!