ಕಾಂಚನ: ಜೇಸಿಐ ಉಪ್ಪಿನಂಗಡಿ ಘಟಕ ಮತ್ತು ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ, ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿಕ್ರಂ ಯುವಕ ಮಂಡಲ ಆಶ್ರಯದಲ್ಲಿ ಸ್ಪಂದನ ಮಕ್ಕಳ ಬೇಸಿಗೆ ಶಿಬಿರ ಕಾಂಚನ ಪ್ರೌಢ ಶಾಲೆ ಸಭಾಂಗಣದಲ್ಲಿ ನಡೆಯಿತು.
ಪ್ರೌಢಶಾಲಾ ಮುಖ್ಯಗುರು ರಮೇಶ್ ಮಯ್ಯ ಉದ್ಘಾಟಿಸಿ ,ಶುಭ ಹಾರೈಸಿದರು.ಜೇಸಿಐ ಘಟಕದ ಅಧ್ಯಕ್ಷೆ ಜೇಸಿ ಲವೀನಾ ಪಿಂಟೊ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದ ಸಂಪನ್ಮೂಲ ವ್ಯಕ್ತಿ, ರಂಗಕರ್ಮಿ ಶೀನಾ ನಾಡೋಳಿ, ಚಿತ್ರಕಲಾ ಶಿಕ್ಷಕ ಮೋಹನ ಗೌಡ, ಶಿಬಿರಾರ್ಥಿಗಳ ಪೋಷಕರಾದ ಯಾದವ ಗೌಡ ನೆಕ್ಕರೆ, ವೀಣಾ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿ, ಜೇಸಿ ದಿವಾಕರ್ ಶಾಂತಿನಗರ ಜೇಸಿವಾಣಿ ವಾಚಿಸಿದರು. ವಿಕ್ರಂ ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ ಕಾಂಚನ ವಂದಿಸಿದರು. ಶಿಬಿರ ನಿರ್ದೇಶಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಚಿತ್ರಕಲೆ, ಮುಖವಾಡ ತಯಾರಿಕೆ, ನೃತ್ಯ, ಹಾಡು, ಭಾಷಣ ಕಲೆ, ಕ್ರಾಫ್ಟ್, ವ್ಯಕ್ತಿತ್ವ ವಿಕಸನ ತರಬೇತಿರಂಗ ಅಭಿನಯ ಮತ್ತು ಜೀವನ ಕೌಶಲ್ಯ ತರಬೇತಿ ನಡೆಯಲಿದೆ.