
ಕೊಕ್ಕಡ: ಕಳೆಂಜ ಗ್ರಾಮದ ಕಾಯರ್ತಡ್ಕ “ನಂದಗೋಕುಲ “ಗೋಶಾಲೆಯ ಮೇ 26ರಂದು ನಡೆಯಲಿರುವ “ನಂದಗೋಕುಲ ದೀಪೋತ್ಸವ”ಕ್ಕೆ ಬೆಳ್ತಂಗಡಿ ತಾಲೂಕಿನ 28 ಗ್ರಾಮಗಳಿಂದ ಮೇ 19ರಂದು ವಾಹನಗಳಲ್ಲಿ ಬೈ ಹುಲ್ಲು, ಹಿಂಡಿ, ತೆಂಗಿನಕಾಯಿ ಇನ್ನಿತರ ಸಾಮಗ್ರಿಗಳು ಹಸಿ ಹುಲ್ಲು ಸಮೇತ ಹೊರೆಕಾಣಿಕೆ ಮೆರವಣಿಗೆ ಮೂಲಕ ಗೋಶಾಲೆಗೆ ಕಲಿಸಿಕೊಡಲಾಯಿತು.

ಗೋಶಾಲೆಯ ಸುಮಾರು 23೦ಕ್ಕೂ ಅಧಿಕ ಗೋವುಗಳಿಗೆ ಗೋಗ್ರಾಸ ತಂದು ಸಮರ್ಪಣೆ ಮಾಡಿದ ಎಲ್ಲಾ ಗ್ರಾಮದ ಪ್ರಮುಖರಿಗೆ ಕಾರ್ಯಕರ್ತ ಬಂಧುಗಳಿಗೆ, ಗೋ ಪ್ರೇಮಿಗಳಿಗೆ ನಂದಗೋಕುಲ ಗೋಶಾಲೆಯ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಕೃತಜ್ಞತೆ ಸಲ್ಲಿಸಿ, ಮುಂದೆಯೂ ದಾನಿಗಳು ಗೋಸೇವೆಯ ಪುಣ್ಯ ಕಾರ್ಯದಲ್ಲಿ ನೆರವಾಗುವಂತೆ ವಿನಂತಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು, ಪಡಂಗಡಿ, ಸುಲ್ಕೇರಿ, ಚಾರ್ಮಾಡಿ, ಕಣಿಯೂರು, ಇಲಂತಿಲ ಗ್ರಾಮಗಳಿಂದ ಗೋಶಾಲೆಯ ಗೋವುಗಳಿಗೆ ಅಗತ್ಯ ಬೇಕಾಗಿರುವ ಹುಲ್ಲು, ಹಿಂಡಿ, ತೆಂಗಿನಕಾಯಿ ಮತ್ತಿತರ ಸಾಮಗ್ರಿಗಳನ್ನು ಹೊರೆಕಾಣಿಕೆ ಮೆರವಣಿಗೆ ಹಾಗು ನಂತರ ಗೋಶಾಲೆಗೆ ಸಮರ್ಪಿಸಿದರು. ಮೇ 19 ರಂದು ಮದ್ಯಾಹ್ನ ಬೆಳ್ತಂಗಡಿ ಎ ಪಿ ಎಂ ಸಿ ಪ್ರಾಂಗಣದಲ್ಲಿ ತಾಲೂಕಿನಿಂದ ಸಮರ್ಪಿಸಲ್ಪಟ್ಟ ಹೊರೆಕಾಣಿಕೆಗಳ ಮೆರವಣಿಗೆಗೆ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ನವೀನ ನೆರಿಯ, ನಾರಾಯಣ ಗೌಡ, ಸೀತಾರಾಮ ಬೆಳಾಲು, ಜಯಾನಂದ ಗೌಡ, ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಶ್ರೀಶ ಭಟ್, ರಮೇಶ್ ಧರ್ಮಸ್ಥಳ, ಯತೀಶ್ ಕಣಿಯೂರು, ಶರತ್ ಮೊದಲಾದವರು ಉಪಸ್ಥಿತರಿದ್ದರು.






