ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ 50 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

ಶೇರ್ ಮಾಡಿ

ನೇಸರ ಫೆ.14:ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಪ್ಲವ ನಾಮ ಸಂವತ್ಸರದ ಕುಂಭ ಮಾಸ ೧೭ ಸಲುವ ತಾರೀಕು 01-03-2022 ನೇ ಮಂಗಳವಾರ ಶ್ರೀ ಗಂಗಾಧರೇಶ್ವರ ದೇವರ ಸನ್ನಿದಿಯಲ್ಲಿ 50 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ ಶ್ರೀ ಶ್ರೀಧರ ನೂಜಿನ್ನಾಯ ಇವರ ನೇತೃತ್ವದಲ್ಲಿ ಆಚರಿಸಲಾಗುವುದು . ಆ ಪ್ರಯುಕ್ತ ಈ ಎಲ್ಲಾಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ಉತ್ಸವವು ಯಶಸ್ವಿಯಾಗಲು ಸಹಕರಿಸಬೇಕಾಗಿ ವಿನಂತಿ.

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 28 .02 .2022 ನೇ ಸೋಮವಾರ

 
ಸಂಜೆ ಗಂಟೆ 6 .30 ಕ್ಕೆ
 
 ಕೊಡಿ ಏರುವುದು
 
ಸಂಜೆ ಗಂಟೆ 7 .00 ಕ್ಕೆ
 
 ದೀಪಾರಾಧನೆ
 
ಸಂಜೆ ಗಂಟೆ 7 .00 ರಿಂದ 10 .00 ರ ತನಕ
 
ಭಜನಾ ಕಾರ್ಯಕ್ರಮ

ದಿನಾಂಕ 01 -03 -2022 ನೇ ಮಂಗಳವಾರ

 
 ಬೆಳಿಗ್ಗೆ ಗಂಟೆ 7 -00 ರಿಂದ 8 -30 ರವರೆಗೆ
 
 ಪುಣ್ಯಾಹವಾಚನ ,ಉಷಾಪೂಜೆ
 
 ಬೆಳಿಗ್ಗೆ ಗಂಟೆ 8 -30 ರಿಂದ ಸಂಜೆ ಗಂಟೆ 4 -00 ರ ತನಕ
 
 ಭಾಗವತ ಪಾರಾಯಣ
 
 ಬೆಳಿಗ್ಗೆ ಗಂಟೆ 9 -30 ರಿಂದ 10 -30 ರ ತನಕ
 
 ಗಣಹೋಮ ,ನವಕ ಕಲಶ
 
 ಮಧ್ಯಾಹ್ನಗಂಟೆ 12 -30 ಕ್ಕೆ
 
 ಮಹಾಪೂಜೆ ,ಪ್ರಸಾದ ವಿತರಣೆ
 
 ಸಂಜೆ ಗಂಟೆ 6 -00 ರಿಂದ
 
 ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ   ಮೆರವಣಿಗೆ ,ದೀಪಾರಾಧನೆ ಮತ್ತು ಸಂದ್ಯಾಪೂಜೆ
 
 ಸಂಜೆ ಗಂಟೆ 7.00 ರಿಂದ 8 .30 ರ ತನಕ 
 
 ನಮ್ಮೂರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ
 
 ರಾತ್ರಿ ಗಂಟೆ 8 -30 ರಿಂದ
 
 ಮಹಾಅನ್ನಸಂತರ್ಪಣೆ
 ರಾತ್ರಿ ಗಂಟೆ 9 .00 ರಿಂದ
 
ಶ್ರೀ ಕಪಿಲೇಶ್ವರ ಸಿಂಗಾರಿ ಚೆಂಡೆ ಮೇಳ ಚಾರ್ವಕ ಇವರಿಂದ ಸಿಂಗಾರಿ ಮೇಳ”
 
 ರಾತ್ರಿ ಗಂಟೆ 9 :30 ನಂತರ
 
 ಶಿವಾಭಿಷೇಕ
 
 ರಾತ್ರಿ ಗಂಟೆ 12 :00 ರಿಂದ 1 -00 ರ ತನಕ
 
 ಮಹಾಶಿವರಾತ್ರಿ ಪೂಜೆ ,ಪ್ರಸಾದ ವಿತರಣೆ

 

ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ಗಂಟೆ 10 .00 ರಿಂದ
 
ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ   ಮಂಗಳೂರು ಇವರಿಂದ
ಶ್ರೀ ರವಿಕುಮಾರ್ ವಿರಚಿತ ಯಕ್ಷಗಾನ
ನಾಗರ ಪಂಚಮಿ ”  ತುಳುಪ್ರಸಂಗ

GOOGLE MAP

NESARA WhatsApp GROUPS & YOUTUBE CHANNELS

NESARA|| WhatsApp ||GROUPS

   
                          

 

  
                                                     

 

ಜಾಹೀರಾತು

Leave a Reply

error: Content is protected !!