ಗುಂಡ್ಯ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ಲಾರಿ; ಟ್ರಾಫಿಕ್ ಜಾಮ್

ಶೇರ್ ಮಾಡಿ

ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಕೊಡೆಕಲ್ಲು ಎಂಬಲ್ಲಿ ಹೆದ್ದಾರಿಯ ಮಧ್ಯೆ ಟ್ಯಾಂಕರ್ ಲಾರಿ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಡಾಮರ್ ಸಾಗಿಸುವ ಟ್ಯಾಂಕರ್ ಒಂದು ಹೆದ್ದಾರಿಯ ಮಧ್ಯೆ ಮೇ 24 ರಂದು ಬೆಳಗಿನ ಜಾವ 2ಗಂಟೆಯಿಂದ ಕೆಟ್ಟು ನಿಂತ ಪರಿಣಾಮ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದರು.

Leave a Reply

error: Content is protected !!