
ಕೊಕ್ಕಡ: ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ ಆಶ್ರಯದಲ್ಲಿ ಕಳೆಂಜ ಗ್ರಾಮದ ಬಂಡೇರಿಯಲ್ಲಿರುವ ನಂದಗೋಕುಲ ಗೋಶಾಲೆಯಲ್ಲಿ ನಡೆಯಲಿರುವ ದೀಪೋತ್ಸವ, ಗೋನಂದಾರತಿ ಹಾಗೂ ನಡೆದ ಗೋಗ್ರಾಸ ಹೊರೆಕಾಣಿಕೆ ಶೋಭಾಯಾತ್ರೆ” ಯ ಕಾರ್ಯಕ್ರಮಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂ. 5,00,000/- ಅನುದಾನದ ಮೊತ್ತದ ಡಿ.ಡಿ.ಯನ್ನು ಮೇ 25 ರಂದು ಶ್ರೀಕ್ಷೇತ್ರದ ಪರವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣರವರು ಟ್ರಸ್ಟ್ ನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಇಂಜಿನೀಯರ್ ಸುರೇಶ್, ಕಳೆಂಜ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಉಮೇಶ್, ಕಳೆಂಜ ಗ್ರಾಮದ ಸೇವಾ ಪ್ರತಿನಿಧಿ ಜನಾರ್ದನ್, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಎಂ. ದಯಾಕರ್, ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಪೂಜಾರಿ, ಕುಮಾರನಾಥ ಶೆಟ್ಟಿ ಕಲ್ಮಂಜ, ರಾಘವೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.






