ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಎರಡು ದಿನಗಳ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಯನ್ನು ಮೇ 29ರಂದು ಸುಬ್ರಹ್ಮಣ್ಯದ ಉದ್ಯಮಿ ಹಾಗೂ ಹವ್ಯಾಸಿ ಕಲಾವಿದರಾದ ಯಜ್ಞೇಶ್ ಆಚಾರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಪ್ರೊಫೆಸರ್ ಲತಾ ಬಿ.ಟಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಯೋಜಕರಾದ ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿ, ಸಾಂಸ್ಕೃತಿಕ ಸಂಘದ ನಾಯಕಿ ಕುಮಾರಿ ಮೋಕ್ಷಿತ ಎಂ ವಂದಿಸಿದರು. ಸಾಂಸ್ಕೃತಿಕ ಸಂಘದ ಸದಸ್ಯರಾದ ಕುಮಾರಿ ಭಕ್ತಿಶ್ರೀ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸದಸ್ಯರಾದ ಸುಮಿತ್ರ ಕೆ ಮತ್ತು ನಮಿತಾ ಇವರು ಉಪಸ್ಥಿತರಿದ್ದರು.
ತರಗತಿವಾರು ಪ್ರತಿಭಾ ಪ್ರದರ್ಶನ ನಡೆದು ಪ್ರದರ್ಶನ ನಡೆದು ಮೇ 30ರಂದು ಸಮಾರೋಪ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಸಾಂಸ್ಕೃತಿಕ ತಂಡದ ಪೂರ್ವ ಸದಸ್ಯೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಕಾಂ ವಿಭಾಗದಲ್ಲಿ ರಾಂಕ್ ಪಡೆದ ಶ್ರಾವ್ಯ ಎಂ.ಎಂ ಭಾಗವಹಿಸಿದ್ದರು.
ತೀರ್ಪುಗಾರರಾದ ಡಾ.ಶ್ರೀಹರ್ಷಿತ್ ಪಡ್ರೆ, ಸುರೇಶ್ ರೈ, ಸಾಂಸ್ಕೃತಿಕ ತಂಡದ ಸಂಯೋಜಕರಾದ ವಿನ್ಯಾಸ್ ಹೊಸೊಳಿಕೆ ಮತ್ತು ಸಾಂಸ್ಕೃತಿಕ ತಂಡದ ನಾಯಕಿ ಮೋಕ್ಷಿತ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಮಧುರ.ಕೆ ಸ್ವಾಗತಿಸಿದರು, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಆರತಿ ವಂದಿಸಿದರು. ಸಾಂಸ್ಕೃತಿಕ ಸಂಘದ ಸದಸ್ಯ ಸುಮಿತ್ರ ನಿರೂಪಿಸಿದರು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತೃತೀಯ ಬಿಕಾಂ ಎ, ದ್ವಿತೀಯ ಸ್ಥಾನವನ್ನು ದ್ವಿತೀಯ ಬಿಎ ಹಾಗೂ ತೃತೀಯ ಸ್ಥಾನವನ್ನು ಪ್ರಥಮ ಬಿಕಾಂ ಎ ತಂಡ ಪಡೆದುಕೊಂಡಿತು.