ಇಚ್ಲಂಪಾಡಿ- ನೇರ್ಲ ಶಾಲೆಯ 3ವಿದ್ಯಾರ್ಥಿಗಳು NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಇಚ್ಲಂಪಾಡಿ- ನೇರ್ಲ ಶಾಲೆಯ 8ನೇ ತರಗತಿಯ ಮೂರು ವಿದ್ಯಾರ್ಥಿನಿಯರು ಎನ್ ಎಮ್ ಎಮ್ ಎಸ್ ಪರೀಕ್ಷೆಯನ್ನು ಬರೆದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಕಾವ್ಯಶ್ರೀ, ಯಶ್ಮಿತಾ. ಬಿ.ಕೆ, ಸಾನ್ವಿ ಎಸ್.ಎಂ, ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಪಾಸ್ ಆಗುವುದರೊಂದಿಗೆ ಪ್ರಸ್ತುತ ಸಾಲಿನ ಶೇಕಡವಾರು ಫಲಿತಾಂಶದಲ್ಲಿ ಶಾಲೆಯು 60%ದೊಂದಿಗೆ ಪುತ್ತೂರು- ಕಡಬ ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಟಿ ಜಿ ಟಿ ಶಿಕ್ಷಕರಾದ ಸಂದೀಪ್ ಕುಮಾರ್, ಜಿ ಪಿ ಟಿ ಶಿಕ್ಷಕರಾದ ಡಾ.ಗಿರೀಶ್ ಎಚ್.ಎಂ ಮಾರ್ಗದರ್ಶನದಲ್ಲಿ ಸತತ 8 ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುತ್ತಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ಜಯಶ್ರೀ.ಎಸ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಅವರು ತಿಳಿಸಿದ್ದಾರೆ.

Leave a Reply

error: Content is protected !!