ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ವ್ಶಾಪ್ತಿಯ ಪಡುಬೆಟ್ಟು ಹೊಸಮನೆ ಮೋಹಿನಿಯವರ ಪತಿ ಅಪಘಾತದಲ್ಲಿ ಮರಣ ಹೊಂದಿದ್ದು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿರುತ್ತಾರೆ. ಬಡ ಮಹಿಳೆಗೆ ಊರವರ ಸಹಕಾರದಿಂದ ಮನೆ ನಿರ್ಮಾಣ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯದ ಶೌರ್ಯ ಘಟಕದ ಸ್ವಯಂ ಸೇವಕರು ಶ್ರಮದಾನದ ಮೂಲಕ ಮನೆ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಘಟಕದ ಸ್ವಯಂಸೇವಕರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ನೀಡಿದ ಸಮವಸ್ತ್ರ ವಿತರಣಾ ಕಾರ್ಯಕ್ರಮ ತಿಂಗಳ ಮಾಸಿಕ ಸಭೆಯನ್ನು ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಮಾಜಿ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಟ್ರಸ್ಟಿ ಕೋಶಾಧಿಕಾರಿ ಸೀತಾರಾಮ ಗೌಡ, ನೆಲ್ಯಾಡಿ ವಲಯದ ಮೇಲ್ವಿಚಾರಕ ವಿಜೇಶ್ ಜೈನ್, ಪಡುಬೆಟ್ಟು ಒಕ್ಕೂಟದ ಅಧ್ಯಕ್ಷರಾದ ಜೋನ್ ಮೊಂತೇರೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ತಿಂಗಳ ಶ್ರಮದಾನದ ಸ್ಥಳದ ಆಯ್ಕೆ ಸ್ವಯಂ ಸೇವಕರ ಭಾಗವಹಿಸುವಿಕೆ ಬಗ್ಗೆ, ಸಭೆಯಲ್ಲಿ ಚರ್ಚಿಸಲಾಯಿತು. ಊರಿನ ಹಿರಿಯರಾದ ಚುಕ್ಕಣ್ಣ ಗೌಡ, ಆಶೋಕ್ ಆಚಾರ್ಯ, ಘಟಕದ ಎಲ್ಲ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಘಟಕ ಸಂಯೋಜಕಿ ನಮಿತಾ ಶೆಟ್ಟಿ ನಿರೂಪಿಸಿದರು. ಸೇವಾಪ್ರತಿನಿಧಿ ಮೋಹಿನಿ ಸ್ವಾಗತಿಸಿ ಘಟಕದ ಸ್ವಯಂಸೇವಕರಾದ ಕುಸುಮ ವಂದಿಸಿದರು.