ಸೈಂಟ್ ಜೊಕಿಮ್ಸ್ ನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ಶೇರ್ ಮಾಡಿ

ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಸಂಸ್ಥೆಯ ಸಂಚಾಲಕರಾದ ವಂ.ಫಾ.ಪ್ರಕಾಶ್ ಪೌಲ್ ಡಿ’ಸೋಜ ಅವರು ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಕಡಬ ಸಮುದಾಯ ಆರೋಗ್ಯ ಕೇಂದ್ರ ಆಪ್ತ ಸಮಾಲೋಚಕರಾದ ಶ್ವೇತಾ ಅವರು ತಂಬಾಕು ಡ್ರಗ್ಸ್, ಮಧ್ಯಪಾನ ಮುಂತಾದ ಅನೇಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು ಎಂದು ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ಸಹಾಯಕಿ ಜಸಿಂತಾ, ಕಿರಿಯ ಆರೋಗ್ಯ ಸಹಾಯಕಿ ಎಲಿಯಮ್ಮ ಜಾನ್, ಆರೋಗ್ಯ ವಿಭಾಗದ ಇನ್ಸ್ಪೆಕ್ಟರ್ ರವಿಶಂಕರ್, ಪ್ರೌಢಶಾಲಾ ಮುಖ್ಯ ಉಪಾಧ್ಯಾಯನಿ ಶ್ರೀಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪೂರ್ಣಿಮ.ಪಿ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ವಿನುತಾ ಸ್ವಾಗತಿಸಿ, ಸಹ ಶಿಕ್ಷಕಿ ಏಲಿಕುಟ್ಟಿ ವಂದಿಸಿದರು.

Leave a Reply

error: Content is protected !!