ಮೋದಿ ಪ್ರಮಾಣವಚನ ಸಮಾರಂಭವನ್ನು ಒಂದು ದಿನ ಮುಂದೂಡಿದ್ದು ಏಕೆ? ಜ್ಯೋತಿಷ್ಯ ಏನು ಹೇಳುತ್ತೇ

ಶೇರ್ ಮಾಡಿ

ದೇಶದಲ್ಲಿ ಲೋಕಸಭಾ ಚುನಾವಣೆಗಳ ಫಲಿತಾಂಶ ಹೊರ ಬಿದ್ದು ಮೂರು ದಿನವಾಗಿದ್ದು, ಸರ್ಕಾರ ರಚಿಸು ಕಾರ್ಯಗಳು ಭರದಿಂದ ಸಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮವನ್ನು ಜೂನ್‌ 8ಕ್ಕೆ ಫಿಕ್ಸ್ ಮಾಡಲಾಗಿತ್ತು.

ಆದರೆ ಇದನ್ನು ಪೋಸ್ಟ್‌ ಮನ್ ಮಾಡಲಾಗಿದೆ. ಹಾಗಿದ್ದರೆ ಹೀಗೆ ಮಾಡಲು ಏನು ಕಾರಣ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನರೇಂದ್ರ ಮೋದಿ ಒಬ್ಬ ದೇಶ, ದೇವರ ಭಕ್ತ. ಆಚರಣೆಗಳ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡ ವ್ಯಕ್ತಿ. ಹೀಗಾಗಿಯೆ ಅವರು ಯಾವುದೇ ಒಳ್ಳೆಯ ಕೆಲಸ ಮಾಡುವುದಿದ್ದರೂ ಉತ್ತಮ ಸಮಯವನ್ನು ನೋಡಿಕೊಂಡೆ ಮುಂದೆ ಸಾಗುತ್ತಾರೆ. ಇತ್ತೀಚಿಗೆ ತಮ್ಮ ನಾಮ ಪತ್ರ ಸಲ್ಲಿಕೆ ಸಮಾರಂಭದ ವೇಳೆಯೂ ಮೋದಿ ಇದನ್ನು ಪಾಲಿಸಿದ್ದರು ಎಂದು ನೆನಪಿಸಿಕೊಳ್ಳಬಹುದು. ಜೂನ್‌ 9 ಮೋದಿ ಪಾಲಿಗೆ ಬೆಸ್ಟ್ ದಿನ ಎಂದು ಜ್ಯೋತಿಷ್ಯ ಕಾರರು ನಂಬುತ್ತಾರೆ. ಹಾಗಿದ್ದರೆ. ಇದೇ ದಿನದಂದು ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜ್ಯೋತಿಷಿಗಳ ಪ್ರಕಾರ, ಜ್ಯೇಷ್ಠ ಶುಕ್ಲ ಪಕ್ಷದ ತೃತೀಯಾ ತಿಥಿಯು ಶುಭ ಕಾರ್ಯಗಳಿಗೆ ಸೂಕ್ತ ದಿನವಾಗಿದೆ. ಆದಿನ ಪುನರ್ವಸು ನಕ್ಷತ್ರವೂ ಇದೆ. ಅದಿತ್ಯನನ್ನು ಈ ನಕ್ಷತ್ರಪುಂಜದ ಅಧಿಪತಿ. ಯೋಗ ಮತ್ತು ಕರಣಕ್ಕೆ ಸಂಬಂಧಿಸಿದಂತೆ, ರಾಜ ಆಡಳಿತದ ಆರಂಭಕ್ಕೆ ವೃದ್ಧಿ ಯೋಗ ಮತ್ತು ಗರ ಕರಣಗಳು ಬಹಳ ಮಂಗಳಕ ಎಂದು ನಂಬಲಾಗಿದೆ.

ಪುನರ್ವಸು ನಕ್ಷತ್ರಕ್ಕೂ ಪ್ರಮಾಣ ವಚನಕ್ಕೂ ಏನು ಸಂಬಂಧ?
ಮೋದಿ ಶ್ರೀರಾಮನ ಕಟ್ಟಾ ಆರಾಧಕ. ಭಗವಾನ್ ಶ್ರೀ ರಾಮನು ಪುನರ್ವಸು ನಕ್ಷತ್ರದ ನವಮಿ ತಿಥಿಯಂದು ಜನಿಸಿದರು. ಈ ನಕ್ಷತ್ರದಲ್ಲಿ ಶುಭ ಕಾರ್ಯವನ್ನು ಮಾಡುವುದರಿಂದ ಕೆಲಸದಲ್ಲಿ ದೀರ್ಘಾಯುಷ್ಯ ಮತ್ತು ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಪುನರ್ವಸು ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ತಿಳಿಯಲಾಗುತ್ತದೆ. ಪುನರ್ವಸು ನಕ್ಷತ್ರದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರಿಂದ ಸರ್ಕಾರದಲ್ಲಿ ಸ್ಥಿರತೆ ಮತ್ತು ಉತ್ತಮ ಕಾರ್ಯನಿರ್ವಹಣೆ ಇರುತ್ತದೆ ಎಂಬ ನಂಬಿಕೆ ಇದೆ.

ಜೂನ್ 9 ಭಾನುವಾರ, ಅಂದರೆ ನಾಯಕತ್ವ, ಆಡಳಿತ, ಶಕ್ತಿ, ದೃಷ್ಟಿ ಮತ್ತು ಆತ್ಮ ವಿಶ್ವಾಸದ ಆಡಳಿತ ಗ್ರಹವಾದ ಸೂರ್ಯನ ದಿನ. ಮೋದಿ ಜಿಯವರ ಜಾತಕದಲ್ಲಿ ಸೂರ್ಯನ ಸ್ಥಾನವೇ ಅವರ ರಾಜಯೋಗಕ್ಕೆ ದೊಡ್ಡ ಕಾರಣ.

ಸಂಖ್ಯಾ ಶಾಸ್ತ್ರ ಏನು ಹೇಳುತ್ತದೆ?
ಸಂಖ್ಯಾಶಾಸ್ತ್ರದ ಪ್ರಕಾರ 9 ಮಂಗಳವನ್ನು ಸೂಚಿಸುತ್ತದೆ. ಅಲ್ಲದೆ ಇದು ಧೈರ್ಯ ಮತ್ತ ಶಕ್ತಿಯನ್ನು ಪ್ರತಿ ನಿಧಿಸುತ್ತದೆ. ಹೊಸ ಸರ್ಕಾರದಲ್ಲಿ ಮಂಗಳ ಹಾಗೂ ಸೂರ್ಯನ ಸಂಯೋಗ ಇದ್ದರೆ, ಕಳೆದ 10 ವರ್ಷಗಳಲ್ಲಿ ಸಂಭವಿಸಿದಂತೆ ಮತ್ತೊಮ್ಮೆ ವಿಶ್ವದಲ್ಲಿ ಭಾರತದ ಪ್ರಜ್ವಲಿಸಲಿದೆ.

ಚತುರ್ಥಿ, ನವಮಿ, ಅಮವಾಸ್ಯೆ ಮತ್ತು ಪೂರ್ಣಿಮೆಗಳನ್ನು ಪಟ್ಟಾಭಿಷೇಕಕ್ಕೆ ಮಂಗಳಕರವಾಗಿವೆ. ರೋಹಿಣಿ, ಪುಷ್ಯ, ಅನುರಾಧ, ಜ್ಯೇಷ್ಠ, ಮೃಗಶಿರ, ಶ್ರಾವಣ, ಉತ್ತರಾಷಾಢ, ರೇವತಿ, ಉತ್ತರಾಭಾದ್ರಪದ ಮತ್ತು ಅಶ್ವಿನಿ ನಕ್ಷತ್ರಗಳು ರಾಜ್ಯ ಕಾರ್ಯಗಳಿಗೆ ಅಧಿಕಾರ ಸ್ವೀಕಾರಕ್ಕೆ ಮಂಗಳಕರವೆಂದು ನಂಬಲಾಗಿದೆ.

ಮಹಾರಾಣಾ ಪ್ರತಾಪ್ ಜಯಂತಿ
ಜೂನ್ 9 ರಂದು ಸಹ ವಿಶೇಷವಾಗಿದೆ ಏಕೆಂದರೆ ಈ ದಿನದಂದು ಮಹಾನ್ ಹೋರಾಟಗಾರ ಮಹಾರಾಣಾ ಪ್ರತಾಪ್ ಅವರ ಜನ್ಮದಿನ.

Leave a Reply

error: Content is protected !!