ಕಡಬ: ಶಿಕ್ಷಕ ಹೊಡೆಯುವ ವೇಳೆ ಕಪಾಟಿಗೆ ತಾಗಿ ವಿದ್ಯಾರ್ಥಿಯ ತಲೆ – ಗಾಯ; ಆಸ್ಪತ್ರೆಗೆ ದಾಖಲು

ಶೇರ್ ಮಾಡಿ

ಕಡಬ: ಸರ್ಕಾರಿ ಶಾಲಾ ಸಹಶಿಕ್ಷಕನೊಬ್ಬ ಹೊಡೆದ ರಭಸಕ್ಕೆ ಶಾಲಾ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜೂ.6 ರಂದು ಕಡಬದಿಂದ ವರದಿಯಾಗಿದೆ.

ಕಡಬ ಸಮೀಪದ ಪಿಜಕ್ಕಳ ಸರ್ಕಾರಿ ಶಾಲೆಯ ಐದನೇ ತರಗತಿ ವದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಬಾಲಕ.

ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಟ್ಟೆ ಇದ್ದದ್ದನ್ನು ಗಮನಿಸಿದ ಶಿಕ್ಷಕ ಈ ವಿದ್ಯಾರ್ಥಿಯೇ ಇಟ್ಟಿರುವುದಾಗಿ ಸಂಶಯಿಸಿ ಬೆನ್ನಿಗೆ ಹೊಡೆದಿದ್ದಾರೆನ್ನಲಾಗಿದೆ. ಹೊಡೆತದ ರಭಸಕ್ಕೆ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ತಲೆ ಮುಂಭಾಗಕ್ಕೆ ಗಾಯವಾಗಿದೆ .
ಬಾಲಕನ ಹೆತ್ತವರು ಶಾಲಾಭಿವೃದ್ದಿ ಸಮಿತಿಯ ಗಮನಕ್ಕೂ ತಂದು ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಈ ಘಟನೆಯ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ರವಾನಿಸಲಾಗಿದೆ. ಪೊಲೀಸರಿಗೂ ಮಾಹಿತಿ ರವಾನೆಯಾಗಿದ್ದು ಪರಿಶೀಲನೆಯ ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ವಿಚಾರಣೆಯ ಬಳಿಕ ವಾಸ್ತವ ಸಂಗತಿ ತಿಳಿದು ಬರಲಿದೆ.

Leave a Reply

error: Content is protected !!