ಸೌತಡ್ಕ ದೇವಳದ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಗಿಡ ನಾಟಿ ಕಾರ್ಯಕ್ರಮ

ಶೇರ್ ಮಾಡಿ

ಕೊಕ್ಕಡ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸೌತಡ್ಕ ದೇವಳದ ಆವರಣದಲ್ಲಿ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ರಕ್ತೆಶ್ವರಿ ಗುಡಿ ಆವರಣದಲ್ಲಿ ಅರಣ್ಯ ಇಲಾಖೆ ಉಪ್ಪಿನಂಗಡಿ ವಿಭಾಗ ಕೊಕ್ಕಡ ಶಾಖೆಯ ವತಿಯಿಂದ ಗಿಡ ನಾಟಿ ಕಾರ್ಯಕ್ರಮ ಜೂ.7ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಲ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಸೌತಡ್ಕ ದೇವಳದ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರಪ್ಪಾಡಿ, ದೇವಳದ ಆಡಳಿತಧಿಕಾರಿ ಶ್ರೀನಿವಾಸ್ ಕೆ.ವಿ, ಮ್ಯಾನೇಜರ್ ರಾಮಕೃಷ್ಣ ಭಟ್, ಅರಣ್ಯ ಇಲಾಖೆಯಿಂದ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಗಸ್ತು ಅರಣ್ಯ ಪಾಲಕರಾದ ಸುನಿಲ್ ನಾಯ್ಕ್, ಶಿವಾನಂದ ಕುದುರಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳಾದ ರೋಹಿಣಿ, ಕುಸುಮ, ಒಕ್ಕೂಟದ ಪದಾಧಿಕಾರಿಗಳಾದ ಅಶ್ವಿನಿ ಓನಿತ್ತಾರ್, ಅರುಣ ಪೂವಾಜೆ ಉಪಸ್ಥಿತರಿದ್ದರು.

Leave a Reply

error: Content is protected !!