ಮಗು ವಿಚಾರಕ್ಕೆ ಮುನಿಸು; ಒಂದೇ ಕಾರಲ್ಲಿ ಬಂದು ಡಿವೋರ್ಸ್‌ ಅರ್ಜಿ ಸಲ್ಲಿಸಿದ ಚಂದನ್‌-ನಿವೇದಿತಾ!

ಶೇರ್ ಮಾಡಿ

ರ್‍ಯಾಪರ್‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದೇ ಕಾರಿನಲ್ಲಿ ಇಬ್ಬರೂ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಖುಷಿಯಾಗಿಯೇ ವಾಪಸ್‌ ಹೊರಟ್ಟಿದ್ದಾರೆ.

ಮಗು ವಿಚಾರಕ್ಕೆ ಸಂಬಂಧ ಪಟ್ಟಂತೆ ಡಿವೋರ್ಸ್‌ಗೆ ಮುಂದಾಗಿದೆ ಈ ದಂಪತಿ. ಮಗು ಈಗಲೇ ಬೇಡ ಎಂದು ನಿವೇದಿತಾ ಕೌಟುಂಬಿಕ ನ್ಯಾಯಾಲಯದ ಮಧ್ಯಸ್ಥಿಕೆ ಸಂದರ್ಭದಲ್ಲಿ ಹೇಳಿದ್ದಾರೆ.

ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್‌ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಂದನ್​ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ (ಕೇಸ್ ನಂಬರ್-Mc 3388-/2024) ಕೋರ್ಟ್​ ಮುಂದಕ್ಕೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಬೆಂಚ್​ ಮುಂದೆ ಈ ಪ್ರಕರಣ ಬಂದಿತ್ತು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕಾಯಿತು.ಮೀಡಿಯೇಷನ್ ಸೆಂಟರ್​ನಲ್ಲಿ ವಿಚ್ಛೇದನ ನೀಡದಂತೆ ಸಲಹೆ ಕೊಡುತ್ತಾರೆ. ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ನ್ಯಾಯಾಧೀಶರು ನಿರ್ಧಾರದ ಬಗ್ಗೆ ಕೇಳುತ್ತಾರೆ. ಬಳಿಕ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಾರೆ.

ಜೋಡಿ ಒಟ್ಟಿಗೆ ರೀಲ್ಸ್‌ ಮಾಡಿ ಸಾಕಷ್ಟು ಕ್ರೇಜ್‌ ಪಡೆದುಕೊಂಡಿತ್ತು. ಇತ್ತೀಚೆಗೆ ನಿವೇದಿತಾ ಒಬ್ಬರೇ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಫ್ಯಾನ್ಸ್‌ ಜೋಡಿ ಬೇರೆಯಾಗಿದೆ ಎಂದು ಕಮೆಂಟ್‌ ಮಾಡುತ್ತಿದ್ದರು.

ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಪ್ರಪೋಸ್‌ ಮಾಡಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಮಂದಿ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಬಿಗ್‌ ಬಾಸ್‌ ಐದನೇ ಸೀಸನ್‌ನಲ್ಲಿ ಚಂದನ್‌ ಗೌಡ ಹಾಗೂ ನಿವೇದಿತಾ ಗೌಡ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲಿಗೆ ಬಿಗ್‌ಬಾಸ್‌ನಲ್ಲಿ ನಿವೇದಿತಾಳನ್ನು ತನ್ನ ತಂಗಿ ಎಂದೇ ಹೇಳುತ್ತಿದ್ದ ಚಂದನ್‌ ಗೌಡ ಬಳಿಕ ಮದುವೆಯಾಗಿದ್ದರು.

ಇದೇ ವರ್ಷ ಮೇ 12ರಂದು ನಿವೇದಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಚಂದನ್‌. ಆರು ದಿನಗಳ ಹಿಂದೆಯಷ್ಟೇ ʻಕೋಟಿʼ ಸಿನಿಮಾ ಪ್ರಚಾರಕ್ಕೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರೂ ಬೇರೆಯಾಗಿದ್ದಾರೆ. ಇದೀಗ ಜೋಡಿಯ ಫ್ಯಾನ್ಸ್‌ ಕಮೆಂಟ್‌ ಮೂಲಕ ಬೇಸರ ಹೊರ ಹಾಕಿದ್ದಾರೆ.

ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಜೋಡಿ!
ನಟಿ ನಿವೇದಿತಾ ಗೌಡ ಹಾಗೂ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಆಗಾಗ ತಮ್ಮ ಪೋಸ್ಟ್‌ ಹಾಗೂ ರೀಲ್ಸ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಿದ್ದರು. ಹಿಂದೊಮ್ಮೆ ಅಂಡರ್​ ವಾಟರ್​ ಶೂಟ್​ ಮಾಡಿರುವ ಜೋಡಿ ಲಿಪ್‌ ಕಿಸ್‌ ಮಾಡಿದ ರೊಮ್ಯಾಂಟಿಕ್​ ವಿಡಿಯೊ ಶೇರ್‌ ಮಾಡಿಕೊಂಡಿತ್ತು. ಸಾವಿರಾರು ಜನರು ಲೈಕ್​ ಮಾಡಿದ್ದರು. ಕೆಲವರು ಈ ವಿಡಿಯೊಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ನೆಗೆಟಿವ್​ ಕಮೆಂಟ್​ ಕೂಡ ಮಾಡಿದ್ದರು.

ಬಿಗ್​ ಬಾಸ್​ ಕನ್ನಡ ಸೀಸನ್​ 5′ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಗಾಯಕ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದನ್​ ಶೆಟ್ಟಿ ಅವರು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರ ಮೊದಲ ಸಿನಿಮಾದ ಶೀರ್ಷಿಕೆ ‘ಎಲ್ರ ಕಾಲೆಳೆಯುತ್ತೆ ಕಾಲ’.

Leave a Reply

error: Content is protected !!