ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ನೆಲ್ಯಾಡಿಯಲ್ಲಿ ಸಾರ್ವಜನಿಕ ಸಭೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಪ್ಲೈ ಓವರ್ ನಿರ್ಮಿಸಬೇಕೆಂಬ ಸಾರ್ವಜನಿಕರ ಹೋರಾಟದಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪದ ಕಾಮಗಾರಿ ಕೆಲಸ ಸಗಿತಗೊಂಡಿದ್ದು. ಇದೀಗ ಪುನರಾರಂಭಿಸುವ ಬಗ್ಗೆ ನೆಲ್ಯಾಡಿಯ ಶಬರೀಶ ಕಲಾಮಂದಿರದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಸಾರ್ವಜನಿಕ ಸಭೆ ಶುಕ್ರವಾರ ನಡೆಯಿತು.

ಹೆದ್ದಾರಿ ಪ್ರಾದಿಕಾರದ ಎಂಜಿನಿಯರ್ ವಿವೇಕಾನಂದ ಮಠಪತಿ ಮಾತನಾಡಿ, ನೆಲ್ಯಾಡಿ ಹೋರಾಟ ಸಮಿತಿಯ ವತಿಯಿಂದ ಪ್ಲೈ ಓವರ್ ನಿರ್ಮಾಣಕ್ಕೆ ಹೋರಾಟ ನಡೆದಿದ್ದು, ಅದಕ್ಕೆ ಪೂರಕವಾಗಿ ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಿ ಕಳಿಸಿಕೊಡಲಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಳಿಸಿದ ಹೊಸ ಪ್ರಾಜೆಕ್ಟ್ ತಿರಸ್ಕಾರಗೊಂಡಿದ್ದು ಪೆರಿಯ ಶಾಂತಿಯಿಂದ ಬಿ.ಸಿ.ರೋಡ್ ವರೆಗಿನ ಚತುಷ್ಪದ ಕಾಮಗಾರಿ ಡಿಸೆಂಬರ್ ಒಳಗಡೆ ಗುತ್ತಿಗೆ ಪಡೆದ ಕೆ ಎನ್ ಆರ್ ಕಂಪನಿಯವರು ಕೆಲಸ ಮುಗಿಸಿಕೊಡಬೇಕಾಗಿರುವುದರಿಂದ ನೆಲ್ಯಾಡಿಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಕೊನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆ ಎನ್ ಆರ್ ಕನ್ಸ್ಟ್ರಕ್ಷನ್ ಅವರು ಹಾಗೂ ನೆಲ್ಯಾಡಿಯ ಸಾರ್ವಜನಿಕರು ಒಟ್ಟಾಗಿ ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುವವರೆಗೆ ಕೆಲಸ ನಿರ್ವಹಿಸದಂತೆ ತಿಳಿಸಲಾಯಿತು.

ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಅವಿನಾಶ್.ಎಚ್ ಗೌಡ, ರಾಷ್ಟ್ರೀಯ ಪ್ರಾಧಿಕಾರದ ಇಂಜಿನಿಯರ್ ಗಳಾದ ನವೀನ್, ವಿವೇಕಾನಂದ ಮಠಪತಿ , ಕೆಎನ್ಆರ್ ಕಂಪನಿಯ ಮಹೇಂದ್ರ ಸಿಂಗ್, ರಘುನಾಥ ರೆಡ್ಡಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೋಕೇಶ್ ಬಾಣಜಾಲ್, ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರಾದ ಎ.ಕೆ.ವರ್ಗೀಸ್ ಉಪಸ್ಥಿತರಿದ್ದರು.

ಸಭೆಯಲ್ಲಿ ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು, ನೆಲ್ಯಾಡಿ – ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನೆಲ್ಯಾಡಿ ಸಮಾನ ಮನಸ್ಕ ಹೋರಾಟ ಸಮಿತಿ ಪದಾಧಿಕಾರಿಗಳು. ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಸದಸ್ಯರು, ಪೋಲೀಸ್ ಇಲಾಖೆಯ ಸಿಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!