ಗೋಳಿತ್ತೊಟ್ಟು: ವಿಪರೀತ ಗಾಳಿ ಮಳೆಗೆ ಕೃಷಿ, ವಿದ್ಯುತ್ ಕಂಬಗಳಿಗೆ ಹಾನಿ

ಶೇರ್ ಮಾಡಿ

ನೆಲ್ಯಾಡಿ : ಜೂ.9ರಂದು ಬೆಳಿಗ್ಗೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಗೋಳಿತ್ತೊಟ್ಟು ಗ್ರಾಮದ ವಿವಿಧ ಕಡೆಗಳಲ್ಲಿ ಮರ, ಅಡಿಕೆಮರ, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.

ಗೋಳಿತ್ತೊಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಮರವೊಂದು ಮುರಿದು ಬಿದ್ದಿದೆ. ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರಾದ ಅನ್ಸಿಫ್, ಸಾನಿಫ್, ಎಂ.ಕೆ.ಆಶ್ರಫ್, ಹನೀಫ್ ಮರ್ಲಾಪು, ಯುಸೂಫ್ ಯಾನೆ ಪುತ್ತುಕುಂಞಿ ಅವರು ಮರ ತೆರವುಗೊಳಿಸಿದರು.

ಪೆರ್ನಾರು ಎಂಬಲ್ಲಿ ವಿದ್ಯುತ್ ಕಂಬವೊಂದು ತುಂಡಾಗಿದ್ದು ಪಂಪ್‌ಶೆಡ್‌ಗೆ ಹಾನಿಯಾಗಿದೆ. ಅನಿಲ ಭಾಗದಲ್ಲಿ ಅಡಿಕೆ ಮರ, ಮರಗಳು ತುಂಡಾಗಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

Leave a Reply

error: Content is protected !!