ಉಜಿರೆ: ಕ್ಷಯರೋಗ ನಿವಾರಣೆಯ ಚಿಕಿತ್ಸಾಕ್ರಮಕ್ಕೆ ಪೂರಕ ಸಂಶೋಧನೆ ನಡೆಸಿದ ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಾಸಾಯನವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕಿಯರಾದ ನಫಿಸತ್ ಮತ್ತು ಶಶಿಪ್ರಭಾ ನಡೆಸಿದ ಸಂಶೋಧನೆಗೆ ಅಮೆರಿಕದ ಪೇಟೆಂಟ್ ದೊರಕಿದೆ.
ಕ್ಷಯ ರೋಗಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರತಿರೋಧಾತ್ಮಕ ವೈರಾಣುಗಳನ್ನು ರೂಪಿಸುವಲ್ಲಿ ಈ ಸಂಶೋಧನೆ ಪ್ರಮುಖ ಹೆಜ್ಜೆಯಾಗಿದೆ.
ಮಂಗಳೂರು ವಿ.ವಿ.ಯ ರಾಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜಗದೀಶಪ್ರಸಾದ್ ಮಾರ್ಗದರ್ಶನದಲ್ಲಿ ಸೌದಿ ಅರೇಬಿಯಾದ ಕಿಂಗ್ ಫೇಸಲ್ ವಿ.ವಿ. ಸಹಯೋಗದೊಂದಿಗೆ ನೆಫಿಸತ್ ಮತ್ತು ಶಶಿಪ್ರಭಾ ಸಂಶೋಧನಾಕಾರ್ಯ ನಡೆಸಿದ್ದರು. ಇದಕ್ಕೆ ಇಪ್ಪತ್ತು ವರ್ಷಗಳ ಅವಧಿವರೆಗೆ ಅಮೆರಿಕದ ಪೇಟೆಂಟ್‌ನ ಮಾನ್ಯತೆ ಚಾಲ್ತಿಯಲ್ಲಿರುತ್ತದೆ. ಸಂಶೋಧನೆಯ ಫಲಿತಗಳ ಆಧಾರ, ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕು ಸ್ವಾಮ್ಯತೆ ಪ್ರಾಧ್ಯಾಪಕಿಯರಿಗೆ ಸೇರಿದೆ.